ಪುದುವೆಟ್ಟು ವನದುರ್ಗಾ ದೇವಸ್ಥಾನದ ಎಸ್.ಟಿ. ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ವಸಂತ ಬಂಗೇರರಿಂದ ಶಿಲಾನ್ಯಾಸ

vanadurge shilanyasaಪುದುವೆಟ್ಟು: ಪುದುವೆಟ್ಟು ಗ್ರಾಮದ ಪುದುವೆಟ್ಟು- ವನದುರ್ಗಾ ದೇವಸ್ಥಾನ ಎಸ್.ಟಿ. ಕಾಲನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಕೆ.ಆರ್.ಐ.ಡಿ.ಎಲ್. ಯೋಜನೆಯಡಿ ಮಂಜೂರಾಗಿರುವ ೨೫ ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕಾಮಗಾರಿಗೆ ಶಾಸಕ ವಸಂತ ಬಂಗೇರ ಅ. 3 ರಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ದೇವಳದ ಅರ್ಚಕರಾದ ಸುಕೇಶ್ ಭಟ್ ಅವರು ಪೂಜಾ ಪ್ರಕ್ರೀಯೆ ನಡೆಸಿಕೊಟ್ಟರು.
ಈ ಸಂದರ್ಭ ಜಿ.ಪಂ. ಸದಸ್ಯೆ ನಮಿತಾ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ಸದಸ್ಯರಾದ ನಾರಾಯಣ ಪಿಲಿಕಲ, ವಾರಿಜಾ, ಗಣ್ಯರಾದ ಧನಂಜಯ ಬಲ್ಕಾಡ್, ರಾಮಣ್ಣ ಎಂ.ಕೆ. ಊರೆಲ್ಕೋಡಿ, ಶೇಖರ ಎಂ.ಕೆ. ಬಲ್ಕಾಡ್, ವಿಶ್ವನಾಥ ಎಂ.ಕೆ. ಊರೆಲ್ಕೋಡಿ, ಪುಷ್ಪಾಕರ ಗೌಡ ಕುರೆಜ್ಜಿ, ಸೋಮ ಬೊಮ್ಮಂತಿಲ್, ನೆರಿಯ ಗ್ರಾ.ಪಂ. ಸದಸ್ಯರಾದ ಬಿ. ಅಶ್ರಫ್, ಪಿ.ಕೆ. ರಾಜನ್, ಪೂವಪ್ಪ ಪೂಜಾರಿ, ಧರ್ಣಪ್ಪ ಪೂಜಾರಿ ಬನದ ಬಾಗಿಲು, ಸೀತಮ್ಮ ನಡುಮನೆ, ಸುಶೀಲಾ ಬಲ್ಕಾಡು, ಶೇಖರ ಗೌಡ ಬನದ ಬಾಗಿಲು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖಾ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಅಭಿಯಂತರ ತೌಸೀಫ್, ಕೆ.ಆರ್.ಐ.ಡಿ.ಯಲ್. ಅಭಿಯಂತರ ಪಾಟೀಲ್, ಸಮಾಜ ಕಲ್ಯಾಣ ಇಲಾಖಾ ತಾ| ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.