ವೇಣೂರು: ಕಲ್ಯಾಣ ಮಂದಿರ ಆರಾಧನೆ – ಸಾಮೂಹಿಕ ವೃತೋಪದೇಶ

Advt_NewsUnder_1
Advt_NewsUnder_1
Advt_NewsUnder_1

munishri samyhika vruthopadeshaವೇಣೂರು: ಮನಸ್ಸಿನ ಕಲ್ಮಶಗಳನ್ನು ದೂರ ಮಾಡಲು ಧ್ಯಾನ ಅಗತ್ಯ. ಎಷ್ಟೇ ಸಂಪತ್ತು ಹೊಂದಿದ್ದರೂ ಮಾನಸಿಕ ನೆಮ್ಮದಿಗೆ ದೇವರ ಭಕ್ತಿಯೇ ಬೇಕು ಎಂದು ರಾಜ್ಯದ ಕ್ರಾಂತಿಕಾರಿ ಸಂತ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ್ ನುಡಿದರು. ವೇಣೂರಿನ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಜರಗುತ್ತಿರುವ ಚಾತುರ್ಮಾಸ್ಯ ವರ್ಷಾಯೋಗದ ಹಿನ್ನೆಲೆಯಲ್ಲಿ ರವಿವಾರ ಜರಗಿದ ಕಲ್ಯಾಣ ಮಂದಿರ ಆರಾಧನೆ ಹಾಗೂ ಸಾಮೂಹಿಕ ವೃತೋಪದೇಶದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.
ಮೂಡಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಸುಮಾರು ೨೫ ಮಂದಿ ಜೈನ ಬಾಲಕ-ಬಾಲಕಿಯರಿಗೆ ವಿಶೇಷ ಸಾಮೂಹಿಕ ವೃತೋಪದೇಶ ಜರಗಿತು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಸುರೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ವಹಿಸಿದ್ದರು. ಉಜಿರೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಜೈನ್ ಮಿಲನ್ ಮುಂದಾಳು ಪ್ರಸನ್ನಕುಮಾರ್ ಉಡುಪಿ, ಪ್ರಸನ್ನ ಕುಮಾರ್ ಪಡಿವಾಳ ಬೆಳ್ತಂಗಡಿ, ಕಾರ್ಯಕ್ರಮದ ಆಯೋಜಕರಾದ ಸರೋಜಾ ಗುಣಪಾಲ ಜೈನ್, ಡಾ| ಮಹಾವೀರ ಜೈನ್, ಡಾ| ಪ್ರಣಮ್ಯ ಎಂ. ಜೈನ್, ವಿನಂತಿ ರತ್ನವರ್ಮ ಪೂವಣಿ, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಳ್ಳಾಲ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಇಂದ್ರ, ಉಪಾಧ್ಯಕ್ಷರಾದ ರತ್ನವರ್ಮ ಇಂದ್ರ, ಉದಯ ಕುಮಾರ್ ಸೇಮಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬೆಳಗಾವಿಯ ಸಾಕ್ಷಿ ಸತೀಶ್ ಬಳಗದವರಿಂದ ಸುಜ್ಞಾನ ಜಿನಭಜನೆ ಕಾರ್ಯಕ್ರಮ ನೆರವೇರಿತು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.