ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

gowdara sanga 2ಬೆಳ್ತಂಗಡಿ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ, ಗಾಂಧಿ ಜಯಂತಿ, ಸನ್ಮಾನ ಕಾರ್ಯಕ್ರಮಗಳು ಅ.2 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾ ಭವನದಲ್ಲಿ ತಾಲೂಕು ಅಧ್ಯಕ್ಷ ಜಿ. ಸೋಮೇ ಗೌಡರ ಅಧ್ಯಕ್ಷತೆಯಲ್ಲಿ ಜರುಗಿತು.
2016-17 ನೇ ಸಾಲಿನ ವರದಿ ಮಂಡನೆ, ಲೆಕ್ಕ ಪತ್ರವನ್ನು ಮಂಡಿಸಿ ಮಂಜೂರಾತಿ ಪಡೆಯಲಾಯಿತು. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಗುರುವಾಯನಕೆರೆ ಪ್ರೌಢ ಶಾಲಾ ಶಿಕ್ಷಕ ವಿಶ್ವನಾಥ ಗೌಡರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ವಿಶ್ವನಾಥ ಗೌಡರು, ಈಗಿನ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕ-ಪೋಷಕರಲ್ಲಿ ಚಿತ್ರಕಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವುದು ಎಂಬುದಕ್ಕೆ ತನ್ನನ್ನೆ ಉದಾರಿಸಿ ಕೊಂಡು ವಿನಂತಿಸಿ ಕೊಂಡರು. ಕಲ್ಮಂಜ ಗ್ರಾಮದ ನೆಲ್ಲಿಗುಡ್ಡೆ ನೋಣಯ್ಯ ಗೌಡರ ಪುತ್ರಿಯ ಶಸ್ತ್ರಚಿಕಿತ್ಸೆಗೆ ಆರೋಗ್ಯ ನಿಧಿಯಿಂದ ಧನಸಹಾಯ ನೀಡಲಾಯಿತು. ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವ ಅಧ್ಯಕ್ಷ ಹೆಚ್.ಪದ್ಮಗೌಡ ಮಹಾಸಭೆಗೆ ಮಾರ್ಗದರ್ಶನ ನೀಡಿದರು.
ತಾಲೂಕು ಯುವ ವೇದಿಕೆ ವತಿಯಿಂದ ನ.5 ರಂದು ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ 2017ರ ಸಂಘಟನೆ, ಉದ್ದೇಶ, ನಿಯಮಗಳ ಬಗ್ಗೆ ವಿವರಿಸಿ, ಹಾಗೆಯೇ ಕ್ರೀಡೋತ್ಸವದ ಯಶಸ್ವಿಗೆ ಎಲ್ಲರ ಸಹಕಾರವನ್ನು ಅಧ್ಯಕ್ಷ ಜಯಾನಂದ ಗೌಡ ಕೋರಿದರು. ತಾಲೂಕು ಮಹಿಳಾ ವೇದಿಕೆ ವತಿಯಿಂದ ಗೌಡರ ಕ್ರೀಡೋತ್ಸವದಂದು ಆಹಾರ ಮೇಳದ ಬಗ್ಗೆ ಅಧ್ಯಕ್ಷೆ ಉಷಾಲಕ್ಷ್ಮಣ ಗೌಡ ತಿಳಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ವರದಿ ವಾಚಿಸಿದರು. 2016-17ನೇ ಸಾಲಿನ ಲೆಕ್ಕ ಪತ್ರವನ್ನು ಕೋಶಾಧಿಕಾರಿ ರಾಜೀವ ಗೌಡ ಮಂಡಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ ಡಿ.ಎಂ ಗೌಡ, ದುಗ್ಗಪ್ಪ ಗೌಡ ಪೊಸಂದೋಡಿ, ಸವಿತಾ ಜಯದೇವ್, ಲೋಕೇಶ್ವರಿ ವಿನಯಚಂದ್ರ, ಧರ್ಣಪ್ಪ ಗೌಡ, ದಾಮೋದರ ಗೌಡ, ಲಕ್ಷ್ಮಣ ಗೌಡ, ಓಬಯ್ಯ ಗೌಡ ಉಪಸ್ಥಿತರಿದ್ದರು. ಬೆಳಾಲು ತಿಮ್ಮಪ್ಪ ಗೌಡ, ಮೋಹನ್ ಕಲ್ಮಂಜ, ಗೋಪಾಲ ಕೃಷ್ಣ ಜಿ.ಕೆ, ಪ್ರಾಂಶುಪಾಲ ಯದುಪತಿ ಗೌಡ, ಪೂವಾಜೆ ಕುಶಾಲಪ್ಪ ಗೌಡ, ಗ್ರಾ.ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಘದ ಎರಡನೇ ಅವಧಿಯ ಅಧ್ಯಕ್ಷ ದಿ| ಪೆರ್ಗಡೆ ಗೌಡರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿದ್ಯಾ ಶ್ರೀನಿವಾಸ್ ವಾಣಿ ಆಂಗ್ಲ ಮಾಧ್ಯಮ ಶಾಲಾ ಸಹ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜತೆ ಕಾರ್ಯದರ್ಶಿ ನ್ಯಾಯವಾದಿ ಗಣೇಶ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.