HomePage_Banner_
HomePage_Banner_

ಡಿ.ಸಿ. ಮನ್ನಾ ಭೂಮಿ ಟಾಸ್ಕ್ ಫೋರ್‍ಸ್‌ಗೆ ತಾಲೂಕಿನಿಂದ ಸದಸ್ಯರ ನೇಮಕ

D:Octo 05.p65ಬೆಳ್ತಂಗಡಿ: ಡಿ.ಸಿ. ಮನ್ನಾ ಜಮೀನನ್ನು ಗುರುತಿಸುವ ಬಗ್ಗೆ ಆಯಾಯಾ ತಾಲೂಕು ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್‍ಸ್‌ನ ಸದಸ್ಯರಾಗಿ ತಾಲೂಕಿನಿಂದ ನಾಲ್ವರನ್ನು ನೇಮಿಸಿ ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್ ಆದೇಶ ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿ ತಾ| ಮುಖಂಡ ಬಿ.ಕೆ. ವಸಂತ್ ಬೆಳ್ತಂಗಡಿ, ನಲಿಕೆಯವರ ಸಮಾಜ ಸೇವಾ ಸಂಘದ ತಾ| ಅಧ್ಯಕ್ಷ ಸೇಸಪ್ಪ ಕೆ. ನಲಿಕೆ ಅಳದಂಗಡಿ, ಶ್ರೀಧರ ಕಳೆಂಜ ಮತ್ತು ನೇಮಿರಾಜ್ ಕಡಿರುದ್ಯಾವರ ಇವರೇ ನೇಮಕಗೊಂಡಿರುವ ಸದಸ್ಯರುಗಳು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಶಿಫಾರಸ್ಸಿನಂತೆ, ಶಾಸಕ ವಸಂತ ಬಂಗೇರ ಪತ್ರ ಆಧರಿಸಿ ಜಿಲ್ಲಾಧಿಕಾರಿಗಳು ಈ ನೇಮಕಾತಿ ಪ್ರಕಟಿಸಿದ್ದಾರೆ.
ಸಮಿತಿಯಲ್ಲಿ ಸಮಾಜ ಕಲ್ಯಾಣಾಧಿಕಾರಿ, ಪೊಲೀಸ್ ನಿರೀಕ್ಷಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಕೂಡ ಸದಸ್ಯರಾಗಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.