ವೇಣೂರು: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಅನುದಾನದ ಸಮಾನ ಹಂಚಿಕೆ ಪುಣ್ಯದ ಕೆಲಸ: ಬಂಗೇರ

mudkodi silanyasaವೇಣೂರು: ಸರಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಈವರೆಗೆ ತಾರತಮ್ಯ ಮಾಡಿಲ್ಲ. ಸಮಾನತೆಯಲ್ಲಿ ಸರಕಾರದ ಸವಲತ್ತುಗಳನ್ನು ಗ್ರಾಮದ ಪ್ರತೀ ಗ್ರಾಮಗಳಿಗೆ ಅಂಚಿದ್ದೇನೆ. ಇದು ನನ್ನ ಪುಣ್ಯದ ಕೆಲಸ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಬುಧವಾರ(ಅ.4) ವೇಣೂರಿನ ಬೆದ್ರಡ್ಡ-ಕಲ್ಲತ್ತಿ-ಅಂಡಿಂಜೆ ರಸ್ತೆಗೆ 1.50 ಕೋಟಿ ರೂ. ಹಾಗೂ ವಿಶೇಷ ಅನುದಾನದಡಿ ನಡ್ತಿಕಲ್ಲು-ಪರಾರಿ ರಸ್ತೆ ಹಾಗೂ ವೇಣೂರಿನ ಪರಪ್ಪು ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ 10 ತಿಂಗಳು ಕಳೆದರೂ ಯಾವುದೇ ಪ್ರತಿಫಲ ಸಿಕ್ಕಿಲ್ಲ. ತಾಲೂಕಿನ ಅಭಿವೃದ್ಧಿಯೇ ನನ್ನ ಧ್ಯೇಯ. ಯಾವುದೇ ಕಾರಣಕ್ಕೂ ಅಪರಾಧಿಗಳ ರಕ್ಷಣೆಗೆ ರಾಜಕೀಯ ಬಳಸಲ್ಲ. ಪ್ರಮುಖವಾಗಿ ರಸ್ತೆ, ಶಾಲಾ ಕಾಲೇಜುಗಳ ನಿರ್ಮಾಣ ಹಾಗೂ ಅಭಿವೃದ್ಧಿ ಆದರೆ ದೇಶದ ಬಡತನ ನಿವಾರಣೆ ಆಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಶಾಸಕರು ರಸ್ತೆಗೆ ನಾಮಕರಣ ಮಾಡಲಾದ ಬ್ರಹ್ಮಶ್ರೀ ಗುರುನಾರಾಯಣಗುರು ರಸ್ತೆ ಫಲಕವನ್ನು ಅನಾವರಣಗೊಳಿಸಿದರು.
ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಗುತ್ತಿಗೆದಾರ ಡಿ.ಆರ್. ರಾಜು, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಮೂಡುಕೋಡಿ ಹಾ.ಉ.ಸ. ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಪ್ರಮುಖರಾದ ಸತೀಶ್ ಹೆಗ್ಡೆ, ಭಾಸ್ಕರ ಬಲ್ಯಾಯ, ಅರುಣ್ ಕ್ರಾಸ್ತ, ಜೆಸ್ಸಿ ಟೀಚರ್, ಕೆ. ವೆಂಕಟಕೃಷ್ಣರಾಜ, ಸುದರ್ಶನ ಕೋಟ್ಯಾನ್, ಇಸ್ಮಾಯಿಲ್ ಕೆ. ಪೆರಿಂಜೆ, ಖಾಲಿದ್ ಪುಲಾಬೆ, ವಿವಿಧ ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಮ್ಮಾನ: ಶಾಸಕ ಕೆ. ವಸಂತ ಬಂಗೇರ, ಪಿ. ಧರಣೇಂದ್ರ ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮಣಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಜಿಲ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
94ಸಿ ಯೋಜನೆಯಡಿ ಫಲಾನುಭವಿ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ನಾಗರಿಕ ಸಮಿತಿ ಅಧ್ಯಕ್ಷ ಅಶೋಕ್ ದೇವಾಡಿಗ ಅಂಡಿಂಜೆ ಸ್ವಾಗತಿಸಿ, ಉಪನ್ಯಾಸಕ ರಾಕೇಶ್ ಕುಮಾರ್ ಮೂಡುಕೋಡಿ ವಂದಿಸಿದರು. ಅನೂಪ್ ಜೆ. ಪಾಯಿಸ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.