ಉಜಿರೆಯಲ್ಲಿ ವಿನ್ಯಾಸ ದಂತ ಚಿಕಿತ್ಸಾಲಯ ಉದ್ಘಾಟನೆ

Advt_NewsUnder_1
Advt_NewsUnder_1

Vinyas dantha chikisthalaya udgataneಉಜಿರೆ: ಉಜಿರೆ ಕಾಲೇಜು ರಸ್ತೆಯಲ್ಲಿರುವ ಅರಿಪ್ಪಾಡಿ ಕಾಂಪೆಕ್ಸ್‌ನ ಬಿ’ಬ್ಲಾಕ್‌ನಲ್ಲಿ ನೂತನವಾಗಿ ಆರಂಭಗೊಂಡ ಡಾ| ಹರ್ಷ ಬಿ.ಎಸ್. ಇವರ ಮಾಲಕತ್ವದ ವಿನ್ಯಾಸ ದಂತ ಚಿಕಿತ್ಸಾಲಯ ಅ.1ರಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮನುಷ್ಯನ ಉತ್ತಮ ಆರೋಗ್ಯದಲ್ಲಿ ದಂತವನ್ನು ಕಾಪಾಡಿಕೊಂಡು ಬರುವುದು ಸೇರಿದೆ. ಹಲ್ಲಿನ ವಿನ್ಯಾಸ ನಮ್ಮ ದೇಹದ ಅಂದವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಹಲ್ಲಿನ ಆರೋಗ್ಯ ಕಾಪಾಡುವ `ವಿನ್ಯಾಸ ದಂತ ಚಿಕಿತ್ಸಾಲಯ’ದ ಸೇವೆ ನಾಗರಿಕರಿಗೆ ದೊರೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೋಟರಿ ಮತ್ತು ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಮಾತನಾಡಿ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುವ ಹಲ್ಲುಗಳನ್ನು ಕಾಪಾಡಿಕೊಂಡು ಬರಬೇಕು. ಹೊಸ ಕನಸುಗಳನ್ನು ಇಟ್ಟುಕೊಂಡು ಡಾ| ಹರ್ಷ ಅವರು ಈ ಚಿಕಿತ್ಸಾಲಯವನ್ನು ಆರಂಭಿಸಿದ್ದಾರೆ. ಒಳ್ಳೆಯ ಮನಸ್ಸು ಒಟ್ಟಾದಾಗ ಉತ್ತಮ ಕಾರ್ಯಗಳು ನಡೆಯುತ್ತದೆ ಎಂದರು.
ಉದ್ಯಮಿ ಉಜಿರೆಯ ಕೆ. ಸುಬ್ರಾಯ ಶೆಣೈ, ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಹಿರಿಯರಾದ ಕಾಂತಾಜೆ ಈಶ್ವರ ಭಟ್, ಅರಿಪ್ಪಾಡಿ ಮಠ ಕಾಂಪ್ಲೆಕ್ಸ್‌ನ ಮಾಲಕ ಬಾಲಕೃಷ್ಣ ಅರಿಪ್ಪಾಡಿತ್ತಾಯ, ಕುಟುಂಬದ ಹಿರಿಯರಾದ ದಾಮೋದರ ಇವರು ಮಾತನಾಡಿ ನೂತನ ಸಂಸ್ಥೆಗೆ ಶುಭ ಕೋರಿದರು. ಡಾ| ಹರ್ಷಾ ಸ್ವಾಗತಿಸಿದರು. ಭೂಷಣ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಬಿ. ವತ್ಸಲ ಧನ್ಯವಾದವಿತ್ತರು. ಬಿ. ಸುಭಾಶ್ಚಂದ್ರ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಉಜಿರೆ ನಾಗರಿಕರು, ಸರಕಾರಿ ಅಧಿಕಾರಿಗಳು, ಬಂಧು ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.