ಕುವೆಟ್ಟು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

Advt_NewsUnder_1
Advt_NewsUnder_1
Advt_NewsUnder_1

kuvettu grama panchayath gandhi puraksaraಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯತಕ್ಕೆ ದೊರೆತ 2016-17ನೇ ಸಾಲಿನ ಗಾಂಧಿ ಗ್ರಾಮ ಪುರ ಸ್ಕಾರ ಪ್ರಶಸ್ತಿಯನ್ನು ಅ.2 ರಂದು ಬೆಂಗಳೂ ರಿನ ತ್ರಿಪುರ ನಿವಾಸಿನಿ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಂಚಾಯತ್‌ರಾಜ್ ಸಚಿವ ಹೆಚ್.ಕೆ ಪಾಟೀಲ್ ಪ್ರದಾನ ಮಾಡಿದರು. ಪಂಚಾಯತದ ಅಧ್ಯಕ್ಷ ಅಶೋಕ್ ಕೋಟ್ಯಾನ್, ಉಪಾಧ್ಯಕ್ಷೆ ಅಕ್ಷತಾ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ರವೀಂದ್ರ ಆರ್. ನಾಯಕ್ ಪ್ರಶಸ್ತಿಯನ್ನು ಸ್ವೀಕರಿಸಿದರು. ತಾ.ಪಂ. ಸಹಾಯಕ ಲೆಕ್ಕಅಧೀಕ್ಷ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ: ಪಂಚಾಯತು ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಉತ್ತಮ ಸಾಧನೆಯನ್ನು ಪರಿಗಣಿಸಿ ಪಂಚತಂತ್ರದ ಮೂಲಕ ಅಂಕಗಳನ್ನು ಹಾಕಿ ರಾಜ್ಯ ಮಟ್ಟದ ಸಮಿತಿ ಕುವೆಟ್ಟು ಗ್ರಾ.ಪಂ. ವನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅ.4ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಆರ್.ನಾಯಕ್ ತಿಳಿಸಿದರು.
ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಪೂರ್ಣ ಶೌಚಾಲಯ ನಿರ್ಮಾಣ, ಎಂ.ಜಿ.ಎನ್.ಆರ್.ಇ.ಜಿ.ಎ ಕಾರ್ಯಕ್ರಮ, ಶೇ 90 ರ ಕರ ವಸೂಲಿ, ಬಸವ ವಸತಿ ಫಲಾನುಭವಿಗಳ ಆಯ್ಕೆ ಮತ್ತು ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಅನುಷ್ಠಾನ, ಬೀದಿದೀಪ ಹಾಗೂ ಸ್ವಚ್ಛ ಭಾರತ್ ಮಿಷನ್ ಪರಿಣಾಮಕಾರಿ ಅನುಷ್ಠಾನ ಹಾಗೂ 14ನೇ ಹಣಕಾಸು ಹಾಗೂ ಇತರೆ ಅನುದಾನ ಸದ್ಭಳಕೆ ಹಾಗೂ ವ್ಯವಸ್ಥಿತವಾಗಿ ಪಂಚಾಯತ್ ಸಭೆಗಳ ನಿರ್ವಹಣೆ ಈ ಬಗ್ಗೆ ರಾಜ್ಯ ಮಟ್ಟದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿತ್ತು ಎಂದು ರವೀಂದ್ರ ನಾಯಕ್ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಮಾತನಾಡಿ, ಕುವೆಟ್ಟು ಗ್ರಾಮ ಮೂರು ಶಾಸಕರನ್ನು ತಾಲೂಕಿಗೆ ಕೊಟ್ಟ ಗ್ರಾಮವಾಗಿದೆ. ಹಾಲಿ ಶಾಸಕ ವಸಂತ ಬಂಗೇರರು ಸೇರಿದಂತೆ ಹಲವು ಮಂದಿ ಕುವೆಟ್ಟು ಮಂಡಲ ಪ್ರಧಾನರಾಗಿ, ಗ್ರಾ.ಪಂ ಅಧ್ಯಕ್ಷರಾಗಿ ಉತ್ತಮ ಕೆಲಸವನ್ನು ಮಾಡಿದ್ದಾರೆ. ನನಗೂ ಈ ಅವಕಾಶ ದೊರಕಿದ್ದು, ಪಂಚಾಯತು ಉಪಾಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು, ಎಲ್ಲಾ ಜನಪ್ರತಿನಿಧಿಗಳು, ಅಂಗನವಾಡಿ, ಶಾಲೆಗಳ ಶಿಕ್ಷಕ ವೃಂದದವರು, ಊರಿನ ಸಮಸ್ತ ನಾಗರಿಕರ ಹಾಗೂ ಸಂಘ-ಸಂಸ್ಥೆಯವರ ಸಹಕಾರದಲ್ಲಿ ಪಂಚಾಯತು ವ್ಯಾಪ್ತಿಯಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಬರಲು ಕಾರಣವಾಯಿತು ಮುಂದೆಯೂ ಎಲ್ಲರ ಸಹಕಾರ ಕೋರುವುದಾಗಿ ತಿಳಿಸಿದರು. ಸರಕಾರದಿಂದ ರೂ.5 ಲಕ್ಷ ಬಹುಮಾನ ಬರಲಿದ್ದು ಇದನ್ನು ಸರಕಾರದ ಮಾರ್ಗಸೂಚಿಯಂತೆ ವಿನಿಯೋಗಿಸುವುದಾಗಿ ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಅಕ್ಷತಾ ಶೆಟ್ಟಿ, ಸದಸ್ಯರಾದ ಸದಾನಂದ ಮೂಲ್ಯ, ಗೋಪಾಲ ನಾಯ್ಕ ಬನ, ಶ್ರೀಮತಿ ಮೋಹಿನಿ, ಕೇಶವ ಯು, ಪುರಂದರ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.