HomePage_Banner_
HomePage_Banner_
HomePage_Banner_

ಜಿಲ್ಲಾ ಕಾಂಗ್ರೆಸ್ ಸಮಿತಿಗೆ ತಾಲೂಕಿನ ಒಟ್ಟು 12 ಮಂದಿ ನೇಮಕ

suddi COLORpdf BLDY.p65ಬೆಳ್ತಂಗಡಿ : ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ(ಡಿಸಿಸಿ)ಗೆ ಬೆಳ್ತಂಗಡಿ ತಾಲೂಕಿನಿಂದ ಒಟ್ಟು 12 ಮಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ನಗರ ಕಾಂಗ್ರೆಸ್ ವಿಭಾಗದಿಂದ ಉಜಿರೆ ಸಹಕಾರಿ ಸಂಘದ ಅಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಲೋಕೇಶ್ವರೀ ವಿನಯಚಂದ್ರ, ನಗರ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಡಿ, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಬಿ.ಎಮ್. ಅಬ್ದುಲ್ ಹಮೀದ್ ಉಜಿರೆ, ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಪ್ರಭಾಕರ ಮದ್ದಡ್ಕ ಮತ್ತು ಲಾಯಿಲ ಗ್ರಾ.ಪಂ. ಸದಸ್ಯೆಯಾಗಿರುವ ಆಶಾ ಬೆನಡಿಕ್ಟ್‌ಸಾಲ್ದಾನಾ ಇವರು ಆಯ್ಕೆಯಾದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದಿಂದ ತಾ.ಪಂ. ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಎ.ಪಿ.ಎಂ.ಸಿ. ಸದಸ್ಯ, ನ್ಯಾಯವಾದಿ ಕೇಶವ ಪಿ. ಬೆಳಾಲು, ಧರ್ಮಸ್ಥಳ ಗ್ರಾ.ಪಂ. ಸದಸ್ಯೆ ರೀನಾ ಶಿಬಿ ಧರ್ಮಸ್ಥಳ, ಜಿ.ಪಂ. ಮಾಜಿ ಸದಸ್ಯ ನಾರಾಯಣ ಎಂ. ಅವರ ಪುತ್ರ ರಾಮಚಂದ್ರ ಎಂ. ಶಿಶಿಲ, ಮತ್ತು ಜೆಸ್ಸಿ ಟೀಚರ್ ವೇಣೂರು ಮೂಡುಕೋಡಿ ಗ್ರಾಮ ಇವರು ಆಯ್ಕೆಯಾಗಿರುವವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.