ಧರ್ಮಸ್ಥಳ ಬಿ. ಪ್ರಕಾಶ ದೇವಾಡಿಗರಿಗೆ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪ್ರಶಸ್ತಿ

Prakash devadiga 2ಬೆಳ್ತಂಗಡಿ: ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳ ಬಿ ಪ್ರಕಾಶ್ ದೇವಾಡಿಗ ಕನ್ನಾಜೆ ಅವರಿಗೆ ತಮಿಳುನಾಡಿನ ವಿಶ್ವವಿಖ್ಯಾತ ಧಾರ್ಮಿಕ ಶ್ರದ್ಧಾ ಪೀಠವಾದ ಕಂಚಿಪುರಂ ಶಂಕರ ಮಠದಿಂದ ನೀಡಲ್ಪಡುವ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪ್ರಶಸ್ತಿ ಘೋಷಿಸಲ್ಪಟ್ಟಿದೆ.

ಅಕ್ಟೋಬರ್ 2 ರಂದು ಶ್ರೀಪೀಠದಲ್ಲಿ ಕ್ಷೇತ್ರದ ಯತಿಶ್ರೇಷ್ಠರಾದ ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ರಾಜ್ಯ- ರಾಷ್ಟ್ರಮಟ್ಟದ ಅಗ್ರಮಾನ್ಯ ಅತಿಥಿಗಳ ಸಮ್ಮುಖ ಪ್ರಕಾಶ ದೇವಾಡಿಗ ಅವರಿಗೆ ತಮ್ಮ ಆಸ್ತಾನದಲ್ಲಿ ಈ ಮನ್ನಣೆಯನ್ನು ಪ್ರದಾನ ಮಾಡಲಿದ್ದಾರೆ.
ಧರ್ಮಸ್ಥಳ ಬಾಬು ದೇವಾಡಿಗ ಮತ್ತು ಸೀತಾ ಬಿ. ದೇವಾಡಿಗ ದಂಪತಿ ಪುತ್ರರಾಗಿದ್ದು, ಪ್ರಾರಂಭದಲ್ಲಿ ತನ್ನ ತಂದೆಯಿಂದಲೇ ಸ್ಯಾಕ್ಸೋಫೋನ್ ವಿದ್ಯೆ ಕಲಿಕೆ ಪ್ರಾರಂಭಿಸಿ ಬಳಿಕ ಪಿ.ಎ. ನಾಗೇಶ್ ಉಪ್ಪಿನಂಗಡಿ ಮತ್ತು ತಂಜಾವೂರು ಟಿ.ಜಿ. ರಾಮ್‌ದಾಸ್ ಅವರಿಂದ ತಲಾ 5 ವರ್ಷ ಗುರುಕುಲ ಮಾದರಿಯಲ್ಲಿ ಸ್ಯಾಕ್ಸೋಫೋನ್ ಕಲೆಯ ಶಿಕ್ಷಣ ಪಡೆದುಕೊಂಡಿದ್ದಾರೆ.
ಬೆಂಗಳೂರು ಆಕಾಶವಾಣಿ, ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ಧಿ ಪಡೆದಿದ್ದಾರೆ.
ಅವರ ಕಲಾ ಸಾಧನೆಯನ್ನು ಗುರುತಿಸಿ ಈಗಾಗಲೇ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ ಇವರಿಂದ ಕಲಾಸಾಧನಾ ಪ್ರಶಸ್ತಿ, ಜೆಸಿಐ ಮಂಗಳೂರು ಘಟಕದಿಂದ ಯುವ ಸಾಧಕ ಪ್ರಶಸ್ತಿ, ಗಡಿನಾಡ ಧ್ವನಿ ಪತ್ರಿಕೆಯ ವತಿಯಿಂದ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಹಾಗೂ ಗಡಿನಾಡ ಧ್ವನಿ ಫೆಲೋಶಿಪ್ ಅವಾರ್ಡ್, ಜಿಲ್ಲಾ ಕಸಾಪ ವತಿಯಿಂದ ವಿಶೇಷ ಪುರಸ್ಕಾರ ಸೇರಿದಂತೆ ನಾಡಿನ ಹಲವೆಡೆ ಸನ್ಮಾನ, ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಸೇರಿದಂತೆ ತಾಲೂಕಿನ ಅನೇಕ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಮುಖ್ಯ ವಾದಕರಾಗಿ ತನ್ನ ಪ್ರಬುದ್ಧ ಕಲಾಸೇವೆ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.