HomePage_Banner_
HomePage_Banner_
HomePage_Banner_

ಮರೋಡಿಯಲ್ಲಿ ಕೆಸರ್‍ದ ಗೊಬ್ಬು ಕಾರ್ಯಕ್ರಮ

  MARODY (1)

MARODY (2)

MARODY (3)

MARODY (5)

MARODY (7)

MARODY (8)ಬೆಳ್ತಂಗಡಿ : ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ ನೇತೃತ್ವದಲ್ಲಿ ಮತ್ತು ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆದ ತುಳುನಾಡ ಮಣ್ಣ್‌ಡ್ ಕೆಸರ್‍ದ ಗೊಬ್ಬು ಕಾರ್ಯಕ್ರಮವು ಸೆ. 17ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮರೋಡಿ ನೆರವೇರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು.
ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಕೇಳ ಮಾಗಣೆ ಬಸದಿ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಿರೀಶ್, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಶುಭಹಾರೈಸಿದರು.
ಕಂಬಳದ ಕೋಣಗಳ ಓಟಗಾರರಾದ ಲಕ್ಷ್ಮಣ ಪೂಜಾರಿ ಮತ್ತು ಶ್ರೀಧರ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಸಂಘಟನೆಯ ಅಧ್ಯಕ್ಷ ಶುಭರಾಜ್ ಹೆಗ್ಡೆ ಸ್ವಾಗತಿಸಿದರು, ಗೌರವ ಸಲಹೆಗಾರ ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರದೀಶ್ ಮರೋಡಿ ಸನ್ಮಾನಿತರ ವಿವರ ನೀಡಿದರು. ಕಾರ್ಯದರ್ಶಿ ದಿನೇಶ್ ಬುಣ್ಣಾನ್ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.