ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

bangady sahakari sangakke prasastiಬಂಗಾಡಿ : ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 2015-16 ನೇ ಸಾಲಿನ ಸಾಧನೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕು ನಿ, ಬೆಂಗಳೂರು, ಇವರು ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ಏಳು ಶಾಖೆಗಳನ್ನು ಹೊಂದಿದ್ದು, 2016-17 ನೇ ಸಾಲಿನಲ್ಲಿ 345.28 ಕೋಟಿ ವ್ಯವಹಾರ ನಡೆಸಿ 39.33 ಕೋಟಿ ಠೇವಣಿ ಹಾಗೂ 56.24 ಕೋಟಿ ಹೊರಬಾಕಿ ಸಾಲವನ್ನು ಹೊಂದಿದೆ. 2016-17 ನೇ ಸಾಲಿನಲ್ಲಿ 1,41,78,981.65 ಲಾಭವನ್ನು ಗಳಿಸಿದೆ.
ಅಪೇಕ್ಸ್ ಬ್ಯಾಂಕಿನ ಪ್ರಶಸ್ತಿ ಪಡೆದ ಸಂಘವನ್ನು ಸೆ.1 ರಂದು ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎನ್.ಲಕ್ಷ್ಮಣ ಗೌಡ ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಲತಾ ಇವರನ್ನು ದ.ಕ.ಜಿ.ಕೇಂದ್ರ ಸ.ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದ.ಕ.ಜಿ, ಕೇಂದ್ರ ಬ್ಯಾಂಕಿನ ನಿರ್ದೇಶಕ ನಿರಂಜನ ಬಿ., ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಕುಮಾರ್ ಹಾಗೂ ದ.ಕ.ಜಿ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ಉಮೇಶ್, ನಿರ್ದೇಶಕರಾದ ನೀಲಯ್ಯ ನಾಯ್ಕ, ಹರೀಶ್ ಸಾಲಿಯಾನ್, ಪ್ರವೀಣ ವಿ.ಜೆ, ಸಹಕಾರ ಸಂಘಗಳ ವಲಯ ಮೇಲ್ವಿಚಾರಕ ಸಂದೇಶ್ ಕುಮಾರ್ ಎಂ. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಇಂದಬೆಟ್ಟು ಇದರ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಎನ್.ಲಕ್ಷ್ಮಣ ಗೌಡ ಮತ್ತು ಹಾಲು ಉತ್ಪಾದಕ ಸಹಕಾರ ಸಂಘ ನಾವೂರು ಇದರ ಅಧ್ಯಕ್ಷ ಉಮೇಶ್ ಹಡೀಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.