ವೇಣೂರು ಚಾತುರ್ಮಾಸ್ಯ: ಕ್ಷಮಾವಳಿ ಕಾರ್ಯಕ್ರಮ ಸರ್ವ ಧರ್ಮದವರಿಗೂ ಮೋಕ್ಷಕ್ಕೆ ಕ್ಷಮಾಧರ್ಮವೇ ಬೇಕು: ಮುನಿಶ್ರೀ ಪ್ರಸಂಗಸಾಗರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

venur munishri kshamavali pgmವೇಣೂರು: ಧರ್ಮವನ್ನು ಸರಿಯಾಗಿ ಅರಿತುಕೊಂಡವರಿಗೆ ಕ್ರೋಧ, ಜಗಳ ಬರುವುದಿಲ್ಲ. ಕೋಪ ದಿಂದ ಆರೋಗ್ಯವೂ ಕೆಡುತ್ತದೆ. ಯಾವುದೇ ಧರ್ಮದವನಾಗಿದ್ದರೂ ಮೋಕ್ಷಕ್ಕೆ ಕ್ಷಮಾಧರ್ಮವೇ ಬೇಕು. ಬೇರ್ಪಟ್ಟ ಕುಟುಂಬಗಳನ್ನು ಒಗ್ಗೂ ಡಿಸುವ ಮತ್ತು ಸಮಾಜದಲ್ಲಿ ಪ್ರೀತಿ, ಪ್ರೇಮವನ್ನು ಭಿತ್ತರಿಸುವ ಕೆಲಸ ಆಗಬೇಕು ಇದು ಮುನಿ, ಸಾಧು, ಸಂತರ ಆಶಯ ಎಂದು ಕ್ರಾಂತಿಕಾರಿ ಸಂತ ಪುಷ್ಪಗಿರಿ ಮುನಿಶ್ರೀ ಪ್ರಸಂಗ ಸಾಗರ ಮಹಾರಾಜ್ ನುಡಿದರು.
ಐತಿಹಾಸಿಕ ಹಿನ್ನೆಲೆಯ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಜರಗುತ್ತಿ ರುವ ಚಾತುರ್ಮಾಸ್ಯ ಪುಷ್ಪವರ್ಷಾ ಯೋಗದ ಹಿನ್ನೆಲೆಯಲ್ಲಿ ಸೆ.೫ರಂದು ಜರಗಿದ ಕ್ಷಮಾವಳಿ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.
ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾ ರ್ಯ ವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯ ದರ್ಶಿ ಡಾ| ಬಿ. ಯಶೋವರ್ಮ ಮಾತನಾಡಿ, ಕ್ರೋಧ ಇಲ್ಲದವನು ನೆಮ್ಮದಿಯಾಗಿರುತ್ತಾನೆ, ಆತ್ಮ ಪರಿಶುದ್ಧ ವಾದಾಗ ಕ್ಷಮಾಭಾವನೆ ಮೂಡುತ್ತದೆ ಎಂದರು. ಮೂಡಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಮುನಿಶ್ರೀಯವರ ಆಚಾರ ವಿಚಾರಗಳು ನಮ್ಮ ಜೀವನದಲ್ಲಿ ಪಾಲನೆ ಆಗುವಂತಾಗಲಿ ಎಂದರು.
ಉಪ್ಪಿನಂಗಡಿಯ ವಜ್ರಕುಮಾರ್, ಉಪ್ಪಿನಂಗಡಿ ಬಿಳಿಯೂರುಗುತ್ತುವಿನ ಧನ್ಯ ಕುಮಾರ್ ರೈ, ಮೂಡಬಿದಿರೆಯ ಕೆ.ಪಿ. ಜಗದೀಶ್ ಅಧಿಕಾರಿ, ಶಿರ್ತಾಡಿ ಶೀಮುಂಜೆಗುತ್ತುವಿನ ಎಸ್.ಡಿ. ಸಂಪತ್ ಸಾಮ್ರಾಜ್ಯ ವೇದಿಕೆಯಲ್ಲಿದ್ದರು.
ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆ ಯ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ನವೀನ್‌ಚಂದ್ ಬಳ್ಳಾಲ್, ಕೋಶಾಧಿಕಾರಿ ರತ್ನವರ್ಮ ಇಂದ್ರ ಬಜಿರೆ, ವಿ. ಪ್ರವೀಣ್ ಕುಮಾರ್ ಇಂದ್ರ, ಉಪಾಧ್ಯಕ್ಷ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು, ಡಾ| ಬಿ.ಪಿ. ಇಂದ್ರ, ಬಿ. ಶಶಿಕುಮಾರ್ ಇಂದ್ರ, ಬಿ. ರತ್ನವರ್ಮ ಇಂದ್ರ, ಶರ್ಮಿತ್ ಕುಮಾರ್ ಹಾಗೂ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಸಮಿತಿಯ ಪ್ರ. ಕಾರ್ಯ ದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿ ಉದಯ ಕುಮಾರ್ ಸೇಮಿತ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.