ಬೆಳ್ತಂಗಡಿ ಜೇಸಿ ಸಪ್ತಾಹದಲ್ಲಿ ರಾಜ್ಯಮಟ್ಟದ ಫಿಲ್ಮಿ ಡ್ಯಾನ್ಸ್ ಸ್ಪರ್ಧೆ ನ್ಯೂ ತ್ರಿಲೋಕ್ ಡ್ಯಾನ್ಸ್ ಉಜಿರೆ ಪ್ರಥಮ: ತಿವಾ ಡ್ಯಾನ್ಸ್ ಬೆಳ್ತಂಗಡಿ ದ್ವಿತೀಯ

JCI dance 1ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ಜೇಸಿ ಸಪ್ತಾಹ ಹೊಂಗನಸು ಇದರಂಗವಾಗಿ ಸೆ. 11ರಂದು ನಡೆದ ರಾಜ್ಯ ಮಟ್ಟದ ಫಿಲ್ಮಿ ಡ್ಯಾನ್ಸ್ ಸ್ಪರ್ಧೆ ಧಮ್ ಇದರಲ್ಲಿ  ನ್ಯೂ ತ್ರಿಲೋಕ್ ಡ್ಯಾನ್ಸ್ ಅಕಾಡಮಿಯ ವಿದ್ಯಾರ್ಥಿಗಳು ಉಜಿರೆ ಇವರು ಪ್ರಥಮ ಸ್ಥಾನದೊಂದಿಗೆ 15 ಸಾವಿರ ರೂ. ನಗದು ಪಡೆದುಕೊಂಡರೆ, ತಿವಾ ಡ್ಯಾನ್ಸ್ ಕ್ರ್ಯೂ ಸಂತೆಕಟ್ಟೆ ಬೆಳ್ತಂಗಡಿ ಇವರು ದ್ವಿತೀಯ ಸ್ಥಾನದೊಂದಿಗೆ 10 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿ ಕೊಂಡರು.  ಪ್ರಥಮ ಬಹುಮಾನವನ್ನು ನ.ಪಂ. ಸದಸ್ಯ, ಜೇಸಿ ಪೂರ್ವಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಬೆಳ್ತಂಗಡಿ ಪ್ರಾಯೋಜಿಸಿದ್ದರೆ, ದ್ವಿತೀಯ ಬಹುಮಾನ 10 ಸಾವಿರ ರೂ. ಅನ್ನು ವಿಜಯ ಕುಮಾರ್ ಸಂತೆಕಟ್ಟೆ ಅವರು ಪ್ರಾಯೋಜಿಸಿ ಕಲೆಯನ್ನು ಪ್ರೋತ್ಸಾಹಿಸಿದ್ದಾರೆ ಎಂದು ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.