ವಿದ್ಯಾರ್ಥಿಗಳು ಮಾನವೀಯ ಹೃದಯವುಳ್ಳ ಪ್ರಜೆಗಳಾಗಿ ರೂಪುಗೊಳ್ಳಬೇಕು: ಡಾ. ಹೆಗ್ಗಡೆ

Advt_NewsUnder_1
Advt_NewsUnder_1

Thaluku shikshakara dinacharane

  • 29 ಮಂದಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
  • ಶೇ 100 ಫಲಿತಾಂಶ ಪಡೆದ 10 ಶಾಲೆಗಳಿಗೆ ಗೌರವಾರ್ಪಣೆ
  • ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ
  • ರಾಷ್ಟ್ರ-ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನೆ
  • ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪುಟುಗಳಿಗೆ ಗೌರವಾರ್ಪಣೆ
  • ತಾಲೂಕಿನ ಅತ್ಯುತ್ತಮ ಶಾಲಾ ಪ್ರಶಸ್ತಿ ಘೊಷಣೆ

ಧರ್ಮಸ್ಥಳದಿಂದ 300 ಗೌರವ ಶಿಕ್ಷಕರು
ಧರ್ಮಸ್ಥಳದಿಂದ ಕಳೆದ 30 ವರ್ಷಗಳಿಂದ ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗುತ್ತಿದ್ದು, ಈ ವರ್ಷ ರಾಜ್ಯದಾದ್ಯಂತ ಶಾಲೆಗಳಿಗೆ 300 ಗೌರವ ಶಿಕ್ಷಕರನ್ನು ನೇಮಕ ಗೊಳಿಸಲಾಗಿದೆ. ಯೋಜನೆ ಮೂಲಕ ರೂ.7 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಅಲ್ಲದೆ ಶಾಂತಿವನ ಮೂಲಕ ನೈತಿಕ ಮೌಲ್ಯಧಾರೀತ ಪುಸ್ತಕಗಳನ್ನು ನೀಡಿ, ವಿದ್ಯಾರ್ಥಿ ಸಮುದಾಯದ ಏಳಿಗೆಗೆ ಶ್ರಮಿಸಲಾಗುತ್ತಿದೆ -ಡಾ. ಹೆಗ್ಗಡೆ

ತಾಲೂಕಿನ ಅತ್ಯುತ್ತಮ ಶಾಲಾ ಪ್ರಶಸ್ತಿ : ಕಾರ್ಯಕ್ರಮದಲ್ಲಿ 2016-17 ಸಾಲಿನ `ತಾಲೂಕಿನ ಅತ್ಯುತ್ತಮ ಶಾಲೆ’ ಪ್ರಶಸ್ತಿಯನ್ನು ಘೋಷಿಸಿ, ಆಯ್ಕೆಯಾದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಾಸಕರು ಪ್ರಶಸ್ತಿ ವಿತರಿಸಿ ಗೌರವಿಸಿದರು.
ಕಿ.ಪ್ರಾ ಶಾಲಾ ವಿಭಾಗದಲ್ಲಿ ಸರಕಾರಿ ಕಿ.ಪ್ರಾ ಶಾಲೆ ಕಜಕೆ, ಹಿ.ಪ್ರಾ ಶಾಲಾ ವಿಭಾಗದಲ್ಲಿ ಸರಕಾರಿ ಹಿ.ಪ್ರಾ ಶಾಲೆ ಕಳೆಂಜ, ಪ್ರೌಢ ಶಾಲಾ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಕಾಶಿಪಟ್ಣ, ಖಾಸಗಿ ಶಾಲಾ ವಿಭಾಗದಲ್ಲಿ ಸಂತ ತೋಮಸರ ಪ್ರೌಢ ಶಾಲೆ ಗಂಡಿಬಾಗಿಲು ನೆರಿಯ ಪ್ರಶಸ್ತಿಯನ್ನು ಪಡೆದುಕೊಂಡಿತು.

ಬೆಳ್ತಂಗಡಿ: ಅಧ್ಯಾಪಕ ವೃತ್ತಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಮಕ್ಕಳ ಬದುಕನ್ನು ರೂಪಿಸುವ ದೊಡ್ಡ ಶಕ್ತಿ ಅಧ್ಯಾಪಕರಲ್ಲಿದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ನಿರ್ಮಾಣವಾಗಬೇಕು, ಮಾನವೀಯ ಹೃದಯವುಳ್ಳ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಶಿಕ್ಷಕರ ದಿನಾಚರಣೆ ಸಮಿತಿ ಬೆಳ್ತಂಗಡಿ, ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು, ತಾ.ಪಂ. ಬೆಳ್ತಂಗಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಹಾಗೂ ನಗರ ಪಂಚಾಯತ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಸೆ.೫ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಡಾ. ಹೆಗ್ಗಡೆಯವರು ಹಿಂದೆ ಸಾಹಿತಿಗಳು ಅಧ್ಯಾಪಕರಾಗಿದ್ದರು. ಅವರು ಬದುಕಿಗಾಗಿ ಅಧ್ಯಾಪಕರಾದವರಲ್ಲ, ದೇಶ ಕಟ್ಟುವುದಕ್ಕಾಗಿ ತಮ್ಮ
ಜೀವನವನ್ನು ತ್ಯಾಗ ಮಾಡಿದ್ದಾರೆ. ಡಾ. ರಾಧಕೃಷ್ಣನ್ ಅಧ್ಯಾಪಕ ವೃತ್ತಿ ಜೊತೆಗೆ ಅಧ್ಯಾಪನ ಮಾಡುತ್ತಾ ತನ್ನ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಂಡು, ವಿಶ್ವದಲ್ಲಿ ಹಿಂದೂ ಧರ್ಮದ ಸಾರವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಪ್ರತಿಪಾದಿಸಿದವರು, ರಾಷ್ಟ್ರಪತಿಯಾಗಿ ಈ ಸ್ಥಾನದ ಘನತೆಯನ್ನು ಹೆಚ್ಚಿಸಿದವರು ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಮ್ಮ ಜೀವನದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಇಂದಿನ ಮಕ್ಕಳಲ್ಲಿ ಹೆಚ್ಚು ಬುದ್ಧಿವಂತಿಕೆಯಿದೆ. ಎಲ್ಲಾ ರೀತಿಯ ತಿಳುವಳಿಕೆಯಿದೆ, ಜ್ಞಾನ ಶಕ್ತಿಯಿದೆ ಅಧ್ಯಾಪಕರ ಪಾಠವನ್ನು ವಿಡಿಯೋದಂತೆ ರೆಕಾರ್ಡ್ ಮಾಡುವ ಶಕ್ತಿ ಇದೆ. ಪ್ರಶ್ನೆಕೇಳುವ ಮನೋಭಾವ ಮಕ್ಕಳಲ್ಲಿ ಹೆಚ್ಚಿದೆ ಇದಕ್ಕಾಗಿ ಅಧ್ಯಾಪಕರ ಶೈಲಿ ಬದಲಾಗಬೇಕು, ಮಕ್ಕಳನ್ನು ಬದುಕಿನ ಉದಾತ್ತರಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರಲ್ಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಗುರುಚೇತನ ವೀಡಿಯೊ ಕ್ಲಿಪ್ಪಿಂಗ್‌ಗೆ ಚಾಲನೆ ನೀಡಿ ಮಾತನಾಡಿ, ಹಿಂದೆ ಗುರುಗಳು ಊರಿನ ಯಜಮಾನರಾಗಿದ್ದರು. ಊರಿನಲ್ಲಿ ಯಾವುದೇ ಕೆಲಸಗಳಾಗಬೇಕಿದ್ದರೂ ಗುರುಗಳ ಅಭಿಪ್ರಾಯ ಕೇಳುತ್ತಿದ್ದರು. ಆ ಪರಂಪರೆ ಇಂದಿಗೂ ಬೆಳೆದು ಬಂದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರಾಗಿ ಮಾಡಿ ದೇಶಕುಟ್ಟುವ ದೊಡ್ಡ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಆಧ್ಯತೆಯ ಮೇಲೆ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಯಿತ್ತರು.
ಮುಖ್ಯ ಅತಿಥಿ ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಮಾತನಾಡಿ ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರಿಗೆ ವಿದ್ಯೆ ಕಲಿಸುವ ಶಿಕ್ಷಕರು ಅಭಿನಂದನಾರ್ಹರು ಎಂದರು. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಶ್ರೀಮತಿ ಮಮತಾ ಎಂ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ನಿವೃತ್ತ ಶಿಕ್ಷಕರ ಪರವಾಗಿ ಪ್ರಭಾಕರ ಹೆಗ್ಡೆ ಅನಿಸಿಕೆ ವ್ಯಕ್ತಪಡಿಸಿದರು. ವೃತ್ತಿಪರ ವಿಚಾರಗಳ ಕುರಿತು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಜಿ. ಲಕ್ಷ್ಮಣ ಶೆಟ್ಟಿ ವಿಚಾರ ಮಂಡಿಸಿದರು.
ಸಮಾರಂಭದಲ್ಲಿ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಹತ್ತು ಶಾಲೆಗಳಿಗೆ ಗೌರವಾರ್ಪಣೆ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಳೆದ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಬಂದಾರು ಹಿ.ಪ್ರಾ ಶಾಲೆ, ಕಾಶಿಪಟ್ಣ ಪ್ರೌಢ ಶಾಲೆ, ಮುಂಡಾಜೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಶಾಸಕರು ಅಭಿನಂದಿಸಿದರು. ಶಿಕ್ಷಕರಿಗೆ ಏರ್ಪಡಿಸಲಾದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೂ.10,666 ಪ್ರೋತ್ಸಾಹಧನ ಹಸ್ತಾಂತರ: ಪ್ರತಿ ವರ್ಷದಂತೆ ಜಿ.ಪಂ. ಮಾಜಿ ಸದಸ್ಯ ಬಿ. ರಾಜಶೇಖರ್ ಅವರು ತನ್ನ ತಂದೆ ಎಚ್. ಲಾಲ್‌ಚಂದ್ರ ಹೆಗ್ಡೆ ಮತ್ತು ಮಾತೃಶ್ರೀ ರಾಜಾವತಿ ಅಮ್ಮನವರ ಸ್ಮರಣಾರ್ಥವಾಗಿ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಬೆಳ್ತಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲು ರೂ.10,666 ಚೆಕ್‌ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಹೆಚ್.ಕೆ. ತಿಪ್ಪೇಸ್ವಾಮಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಕೆ. ಅಯ್ಯಣ್ಣನವರ್, ದೈ.ಶಿ. ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ ಹಾಗೂ ಶಿಕ್ಷಣ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ಯವರು ಶಿಕ್ಷಕರ ಬೇಡಿಕೆಗಳನ್ನು ಮಂಡಿಸಿದರು. ಸವಣಾಲು ಶಾಲಾ ಶಿಕ್ಷಕಿ ಮಹಾಲಕ್ಷ್ಮೀ ಇವರ ಪ್ರಾರ್ಥನೆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಗುರುಪ್ರಸಾದ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಲಲಿತಾ ಸಂದೇಶ ವಾಚಿಸಿದರು. ಶಿಕ್ಷಕರಾದ ಧರಣೇಂದ್ರ ಕೆ. ಜೈನ್ ಮತ್ತು ದೇವುದಾಸ್ ನಾಯಕ್ ನಿವೃತ್ತ ಶಿಕ್ಷಕರನ್ನು ಪರಿಚಯಿಸಿದರು. ಶಿಕ್ಷಣ ಸಂಯೋಜಕ ರಮೇಶ್ ಕೆ, ಚಂದ್ರಶೇಖರ ಶೆಟ್ಟಿ, ಗುಣಪಾಲ ಎಂ.ಎಸ್, ಯುವರಾಜ ಅನಾರ್, ರಮೇಶ್ ಮಯ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಯಶೋಧರ ಸುವರ್ಣ ವಂದಿಸಿದರು.
ಕಾರು-ದ್ವಿಚಕ್ರ ವಾಹನಗಳ ಪ್ರದರ್ಶನ: ಸಭಾಂಗಣದ ಹೊರಗೆ ಭಾರತ್ ಆಟೋ ಕಾರ್‍ಸ್ ಬೆಳ್ತಂಗಡಿ, ಹುಂಡೈ ಶೋರೂಮ್ ಬೆಳ್ತಂಗಡಿ, ಟಿ.ವಿ.ಎಸ್ ಶೋ ರೂಮ್ ಬೆಳ್ತಂಗಡಿ ಇವರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳ ಪ್ರದರ್ಶನವನ್ನು ಏರ್ಪಡಿಸಿ, ಮಾಹಿತಿ ನೀಡಿದರು. ಟಿ.ವಿ.ಎಸ್.ನವರು ಅದೃಷ್ಟ ವ್ಯಕ್ತಿಗಳ ಆಯ್ಕೆ ನಡೆಸಿ ಬಹುಮಾನ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.