ಶ್ರೀ ವೀರಾಂಜನೇಯ ಸೇವಾ ಸಮಿತಿಯಿಂದ ಸೇವಾಸಂಸ್ಥೆಗಳಿಗೆ ಗೌರವಾರ್ಪಣೆ

veeranjaneya seva samithi sahayaಬೆಳ್ತಂಗಡಿ : ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ಸೇವೆಗಾಗಿ ವೀರಾಂಜನೇಯ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ಶ್ರೀ ವೀರಾಂಜನೇಯ ಸೇವಾ ಸಮಿತಿ ಕಳೆದ 6 ತಿಂಗಳಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು 10 ಸೇವಾಯೋಜನೆ ಹಾಗೂ 2 ತುರ್ತು ಸೇವಾಯೋಜನೆ, ಒಟ್ಟು 12 ಬಡಕುಟುಂಬದ ಕಣ್ಣೀರು ಒರೆಸಿ ಅವರ ಕಷ್ಟಗಳಿಗೆ ಸ್ವಲ್ಪ ಮಟ್ಟಿಗಾದರೂ ಹೆಗಲು ಕೊಡುವ ಸಣ್ಣ ಕಾರ್ಯವನ್ನು ಮಾಡುತ್ತ ಬಂದಿದೆ.
ಸೇವಾ ಸಮಿತಿಯಿಂದ ನಂದಿಕೇಶ್ವರ ಸಭಾಭವನ , ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಗರ್ಡಾಡಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮ, ಮುದ್ರಯೋಜನೆಯ ಮಾಹಿತಿ, ಹಾಗೂ ತೆರೆಮರೆಯಲ್ಲಿ ಬಡವರ ಸೇವೆ ಮಾಡುತ್ತಿರುವ ಸೇವಾಸಂಸ್ಥೆಗಳಿಗೆ ಗೌರವಾರ್ಪಣೆ ಹಾಗೂ ತಂಡದ ಮಾಸಿಕ 11 ನೇ ಸೇವಾಯೋಜನೆಯಾಗಿ ಪಣಪಿಲ ಗ್ರಾಮದ ಅಶ್ವಿತ್ ಎಂಬ ಈ ಪುಟ್ಟ ಬಾಲಕ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಈ ಬಾಲಕನ ಚಿಕಿತ್ಸೆಗಾಗಿ ತಂಡದ ಸದಸ್ಯರ ನೆರವಿನಿಂದ ಸಂಗ್ರಹಿಸಿದ ರೂ. 25000 ಸಹಾಯಧನವನ್ನು ಯುವನಾಯಕ ಹರೀಶ್ ಪೂಂಜ, ಸಂಪತ್ ಸುವರ್ಣ, ಕೆ.ಆರ್ ಶೆಟ್ಟಿ ಅಡ್ಯಾರ್‌ಪದವು ಹಾಗೂ ಇನ್ನಿತರ ಗಣ್ಯರ ಹಾಗೂ ತಂಡದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.