ರಾಜ್ಯ ಬುಡಕಟ್ಟು ಸಂಶೋಧನಾಧಿಕಾರಿಗಳಿಂದ ಮಲೆಕುಡಿಯ ಕಾಲೊನಿಗಳ ಭೇಟಿ

Advt_NewsUnder_1
Advt_NewsUnder_1

  malekudiya bhetiಬೆಳ್ತಂಗಡಿ : ಆದಿವಾಸಿಗಳ ಅಭಿವೃದ್ದಿಗಾಗಿ ವಿಶೇಷ ಯೋಜನೆಗಳ ಅಭಿವೃದ್ಧಿ ಕೇಂದ್ರ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆ ಮೈಸೂರು ಇದರ ಸಂಶೋಧನಾಧಿಕಾರಿಗಳಾದ ಡಾ.ಸಿ. ಮಾದೇಗೌಡ ಅವರು ಮೂಲ ಆದಿವಾಸಿಗಳು ಮತ್ತು ಅರಣ್ಯ ಆದಿವಾಸಿಗಳ ಅಧ್ಯಯನದ ಪೂರ್ವಭಾವಿ ಸಮೀಕ್ಷೆಗಾಗಿ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಮತ್ತು ಕೊರಗ ಸಮುದಾಯದ ಕಾಲೊನಿಗಳಿಗೆ ಭೇಟಿ ನೀಡಿದರು.
ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕುತ್ಲೂರು, ಶಿರ್ಲಾಲ್, ಎಳನೀರು, ಸುಲ್ಕೇರಿಮೊಗ್ರು, ಅನ್ನಾರ್, ಬಾಂಜಾರುಮಲೆ, ಕೋಲೋಡಿ ಮುಂತಾದ ಪ್ರದೇಶಗಳ ಸ್ಥಿತಿ ಗತಿ, ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದಿರುವುದು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ಎಳನೀರು ಅವರು ಸಂಶೋಧನಾಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿದರು.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಯಾವುದೇ ಕ್ಲೇಮುಗಳನ್ನು ಮಾಡಲು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲ, ಅರ್ಜಿ ಸಲ್ಲಿಸಲು ಬಾಕಿ ಇರುವವರು ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಶೋಧನಾಧಿಕಾರಿಗಳು ತಿಳಿಸಿದರು. ಕುತ್ಲೂರಿನ ಅಲಂಬ, ಶಿರ್ಲಾಲಿನ ಬೈಲಡ್ಕ, ಸುಲ್ಕೇರಿ, ಅಟ್ರಿಂಜೆ, ಕಕ್ಕಿಂಜೆ ಮೊದಲಾದ ಪ್ರದೇಶದ ಮಲೆಕುಡಿಯ ಮತ್ತು ಕೊರಗ ಕುಟುಂಬಗಳನ್ನು ಭೇಟಿಯಾಗಿ ಮಾಹಿತಿ ಪಡೆಯಲಾಯಿತು. ಈ ಸಂದರ್ಭ ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಉಪಾಧ್ಯಕ್ಷ ಮೋನಪ್ಪ ಶಿರ್ಲಾಲ್ ಮತ್ತು, ಶೇಸಪ್ಪ, ಕವಿತಾ, ಸಂಶೋಧಕ ಡಾ.ಮೋಹನ್ ಕುಮಾರ್, ಭುಂಗಲ್, ಆಶಾ, ಕಿಶೂಮಧಿ, ಕೊರಗ ಸಮುದಾಯದ ಮುಖಂಡ ರಮೇಶ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.