ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೇಂದ್ರ ಒಕ್ಕೂಟ ಸಮಿತಿಗೆ ಪ್ರಭಾಕರ ಪೊಸೊಂದೋಡಿ ಅಧ್ಯಕ್ಷರಾಗಿ ಆಯ್ಕೆ

PRABHAKAR posondodiಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಹಾಗೂ ಸ್ವ ಸಹಾಯ ಸಂಘಗಳ ಬೆಳ್ತಂಗಡಿ ತಾಲೂಕು ಕೇಂದ್ರ ಒಕ್ಕೂಟ ಸಮಿತಿಗೆ ಅಧ್ಯಕ್ಷರಾಗಿ ಮಡಂತ್ಯಾರು ವಲಯದ ಅಧ್ಯಕ್ಷ ಪ್ರಭಾಕರ ಪೊಸೊಂದೋಡಿ ಆಯ್ಕೆಯಾದರು.
ಸಿರಿ ಕಟ್ಟಡದಲ್ಲಿರುವ ಯೋಜನೆಯ ಬೆಳ್ತಂಗಡಿ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತಾ| ಯೋಜನಾಧಿಕಾರಿ ಜಯಕರ ಶೆಟ್ಟಿ, ನಿರ್ದೇಶಕ ಚಂದ್ರಶೇಖರ್ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಮೋನಪ್ಪ, ಯೋಜನೆಯ ಕೊಕ್ಕಡ ವಲಯ ಅಧ್ಯಕ್ಷ ಪ್ರಭಾಕರ ಶೆಟ್ಟಿಗಾರ್, ಬೆಳ್ತಂಗಡಿ ವಲಯ ಅಧ್ಯಕ್ಷ ಮಧುಸೂಧನ, ಉಜಿರೆ ವಲಯ ಅಧ್ಯಕ್ಷ ಜಿ. ವಿಜಯ, ಕಣಿಯೂರು ವಲಯ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಧರ್ಮಸ್ಥಳ ವಲಯ ಅಧ್ಯಕ್ಷ ಕೋಟ್ಯಪ್ಪ ಪೂಜಾರಿ, ನಾರಾವಿ ವಲಯ ಅಧ್ಯಕ್ಷ ಯಶೋದರ ಬಂಗೇರ, ಅಳದಂಗಡಿ ವಲಯ ಅಧ್ಯಕ್ಷ ದೀಪಕ್ ಆಠವಳೆ, ಮೇಲ್ವಿಚಾರಕರಾದ ದಿನೇಶ್ ನಾರಾವಿ, ಗಿರೀಶ್ ಅಳದಂಗಡಿ, ಆದಿತ್ಯ ಕಣಿಯೂರು, ಅಶ್ವಿತಾ ಉಜಿರೆ, ರವಿ ಚಾರ್ಮಾಡಿ, ರವಿಕಲಾ ಕೊಕ್ಕಡ, ಕೃಷಿ ಮೇಲ್ವಿಚಾರಕ ಉಮೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.