HomePage_Banner_
HomePage_Banner_
HomePage_Banner_

ಶರತ್ ಹತ್ಯೆ ಪ್ರಕರಣ: ತಾಲೂಕಿನ ಪಾರೆಂಕಿ ನಿವಾಸಿ ರಿಯಾಝ್ ಸಹಿತ ಒಟ್ಟು 10 ಮಂದಿಯ ಬಂಧನ

Riyazಬೆಳ್ತಂಗಡಿ : ರಾಜ್ಯಾದ್ಯಂತ ಭಾರೀ ಚರ್ಚೆ, ಪ್ರತಿಭಟನೆಗೆ ಕಾರಣವಾಗಿದ್ದ ಮತ್ತು ದ.ಕ. ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಭಾರೀ ಉದ್ವಿಘ್ನತೆಗೆ ಹೇತುವಾಗಿದ್ದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳ ಪೈಕಿ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಸಾಲ್ಮರ ನಿವಾಸಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ ರಿಯಾಝ್ ಎಂಬವರೂ ಒಳಗೊಂಡಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳ ಸಂಖ್ಯೆ ೧೦ಕ್ಕೇರಿದೆ. ಇನ್ನೂ ನಾಲ್ಕೈದು ಮಂದಿಯನ್ನು ಬಂಧಿಸುವ ಸಾಧ್ಯತೆ ಇದ್ದು ಆ ಪೈಕಿ ಇನ್ನೂ ಒಂದಿಬ್ಬರು ತಾಲೂಕಿನವರು ಒಳಗೊಂಡಿದ್ದಾರೆ ಎಂಬ ಮಾಹಿತಿ ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಒಟ್ಟು ಬಂಧಿತರು:
ಚಾಮರಾಜನಗರ ಗಾಳಿಪುರ ನಿವಾಸಿ ಖಲೀವುಲ್ಲಾ, ಬಂಟ್ವಾಳ ತಾಲೂಕು ಸಜಿಪಮುನ್ನೂರು ಆಲಾಡಿ ಇಂದಿರಾ ನಗರದ ಅಬ್ದುಲ್ ಶಾಫಿ ಯಾನೆ ಶಾಫಿ, ಪುತ್ತೂರು ತಾಲೂಕು ನೆಲ್ಯಾಡಿಯ ಸಾದಿಕ್, ಪುತ್ತೂರು ತಾ| ರಾಮಕುಂಜ ಕುಂಡಾಜೆ ಜಬ್ಬಾರ್, ಬಂಟ್ವಾಳ ತಾಲೂಕಿನ ಆಲಾಡಿ ಶರೀಫ್, ಚಾಮರಾಜ ನಗರದ ಖಲೀಲ್ ಯಾನೆ ಖಲೀಮುಲ್ಲಾ, ಬಂಟ್ವಾಳ ನಿವಾಸಿ ರಹೀಂ, ಹಾಸನದ ಸಲೇಹ ಯಾನೆ ಸ್ವಲೇಹ್, ಸಾದಿಕ್ ಪಾಷಾ ಇದುವರೆಗೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು.
ಕೊಲೆ ಪ್ರಕರಣ ಬೇಧಿಸಲು ಪೊಲೀಸರು ಈಗಾಗಲೇ ೭ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದು ತಂಡಕ್ಕೆ ಮಹತ್ವದ ಯಶಸ್ಸು ದೊರೆತಂತಾಗಿದೆ.
ಕೃತ್ಯದಲ್ಲಿ ರಿಯಾಝ್ ಪಾತ್ರವೇನು?
ಶರತ್ ಮಡಿವಾಳ ಅವರನ್ನು ಜು. ೪ ರಂದು ರಾತ್ರಿ ಬಿ.ಸಿ. ರೋಡ್‌ನಲ್ಲಿ ಮಾರಕಾಯುಧಗಳಿಂದ ಕೊಚ್ಚಿ ಹಾಕಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಜು. ೬/೭ ರಂದು ರಾತ್ರಿ ಚಿಕಿತ್ಸೆ ಸ್ಪಂದಿಸದೆ ಮಂಗಳೂರಿನ
ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಕೃತ್ಯ ನಡೆದ ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಮಹತ್ವದ ಸುಳಿವಿನ ಪ್ರಕಾರ ಪ್ರಾರಂಭದಲ್ಲಿ ಚಾಮರಾಜನಗರದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆ ಬಳಿಕ ಇಡೀ ಪ್ರಕರಣದ ಚಿತ್ರಣ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ರಿಯಾಝ್ ಅವರನ್ನು ಬಂಧಿಸಲಾಗಿದೆ. ರಿಯಾಝ್ ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಆರೋಪಿಯಲ್ಲ. ಆದರೆ ಸೆಂಟ್ರಿಂಗ್ ಶೀಟ್ ಬಾಡಿಗೆ ನೀಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ರಿಯಾಝ್ ಪಿಎಫ್‌ಐ ಸಂಘಟನೆಯ ಜವಾಬ್ಧಾರಿ ಹುದ್ದೆಯಲ್ಲಿದ್ದು, ಸಂಘಟನೆಯ ವ್ಯಕ್ತಿಯೊಬ್ಬರ ಸೂಚನೆಯಂತೆ ಕೊಲೆಯಲ್ಲಿ ಭಾಗಿಯಾಗಿರುವ ಶರೀಫ್ ಎಂಬವರನ್ನು ಬೇರೆ ಕಡೆಗೆ ವರ್ಗಾಯಿಸಿ, ಒಂದೆರಡು ದಿನ ಆಶ್ರಯದ ವ್ಯವಸ್ಥೆ ಮಾಡಿದ್ದರು ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.