ಗುರುವಾಯನಕೆರೆ `ಆಟಿಡೊಂಜಿ ದಿನ’ ಕಾರ್ಯಕ್ರಮ ತುಳುನಾಡಿನ ಪರಂಪರೆಯನ್ನು ನೆನಪಿಸುವ ದಿನ: ನಂದ ಕುಮಾರ್

kulala ati koota 1ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ ಕುಂಬಾರರ ಯುವ ವೇದಿಕೆ ಇದರ ಆಶ್ರಯದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಮತ್ತು ಕುಲಾಲ ಕುಂಬಾರ ಕ್ರೀಡಾ ಸಮಿತಿ ಗುರುವಾಯನಕೆರೆ ಇದರ ಸಹಯೋಗದಲ್ಲಿ `ಆಟಿಡೊಂಜಿ ದಿನ’ ಕಾರ್ಯಕ್ರಮ ಆ.13ರಂದು ಕುಲಾಲ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಯುವ ವೇದಿಕೆ ಲಾಯಿಲ ಜಿ.ಪಂ. ಸಂಚಾಲಕ ಪುಷ್ಪರಾಜ್ ಕುಲಾಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್ ವಹಿಸಿದ್ದರು. ಮೂಲ್ಯರ ಯಾನೆ ಕುಲಾಲರ ಸಂಘದ ತಾಲೂಕು ಕಾರ್ಯದರ್ಶಿ ಮೋಹನ್ ಕಂಚಿಂಜ, ಅಶ್ವಿತ್ ಕುಲಾಲ್ ಓಡೀಲು, ಹರಿಶ್ಚಂದ್ರ ಮೂಲ್ಯ ಉಪಸ್ಥಿತರಿದ್ದರು. ಬಳಿಕ ಆಟಿಡೊಂಜಿ ದಿನದ ವಿವಿಧ ರೀತಿಯ ಮನೋರಂಜನೆಗಳು ಮತ್ತು ಮಕ್ಕಳ ಆಟಿ-ಆಟೋಟಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಮತ್ತು ಛಾಯಾ ಗ್ರಾಹಕ ನಂದ ಕುಮಾರ್ ಅವರು ಹಿಂದೆ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ನಡೆಸುತ್ತಿದ್ದ ಕಷ್ಟದ ಜೀವನ, ಉಟೋಪಚಾರಗಳನ್ನು ನೆನಪಿಸಿ, ನಸಿಸುತ್ತಿರುವ ತುಳುನಾಡ ಪರಂಪರೆಯ ಆಚರಣೆಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ನಮ್ಮಲ್ಲಿ ಸಂಘಟನೆ ಬೇಕು, ಪರಸ್ಪರ ಬೆರೆತು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದರ ಜೊತೆಗೆ ನಮ್ಮ ಸಂಸ್ಕೃತಿ, ಸಾಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಖಂಡಿಗ ಮಾತನಾಡಿ ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು ಕುಲಾಲ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಹಾಕಿಕೊಟ್ಟ ಪರಂಪರೆಯ ಹಾದಿಯಲ್ಲಿ ನಾವು ನಡೆಯಬೇಕು, ನಮ್ಮ ಸಮಾಜ, ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ನೂತನವಾಗಿ ಕಲಾಮಂದಿರವನ್ನು ನಿರ್ಮಿಸಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು. ಹಿರಿಯರಾದ ಕರಿಯ ಮೂಲ್ಯ ಪಾಡ್ದನ ಹೇಳಿ ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರ ದಯಾನಂದ ಕುಲಾಲ್ ಸಂಜಯನಗರ, ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಶ್ವಿತ್ ಮೂಲ್ಯ ಓಡೀಲು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಉಮೇಶ್ ಕುಲಾಲ್, ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಕುಲಾಲ ಕುಂಬಾರ ರಾಜ್ಯ ಸಂಘಟನಾ ಸಂಚಾಲಕ ಪದ್ಮಕುಮಾರ್ ಬೆಳ್ತಂಗಡಿ, ಸುದ್ದಿಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಬಿ.ಎಸ್ ಕುಲಾಲ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಮುಖೇಶ್ ಕುಲಾಲ್ ಪಾಂಡೇಶ್ವರ ಸ್ವಾಗತಿಸಿದರು. ಯುವ ವೇದಿಕೆ ಲಾಯಿಲ ಸಂಚಾಲಕ ಪುಷ್ಪರಾಜ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶ್ವಿತ್ ಮೂಲ್ಯ ಓಡೀಲು ವಂದಿಸಿದರು. ನಂತರ ಆಟಿಯ ವಿಶೇಷ ತಿಂಡಿಗಳ ಪ್ರದರ್ಶನ ಮತ್ತು ಭೋಜನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.