ಎಸ್ಸೆಸ್ಸೆಲ್ಸಿ-ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಅಂಕ ಮಾತ್ರ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವುದಿಲ್ಲ: ಡಾ. ಯಶೋವರ್ಮ

Prathibha puraskaraಬೆಳ್ತಂಗಡಿ : ಸದ್ಭಾವನಾ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ 2016-17ನೇ ಶೈಕ್ಷಣಿಕ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಪ್ರಥಮ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಆ.15 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಅವರು ಶಾಲೆಯಲ್ಲಿ ಗಳಿಸಿದ ಅಂಕ ಮಾತ್ರ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವುದಿಲ್ಲ, ಬದುಕಿಗೆ ಹಲವಾರು ಆಯಾಮಗಳಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕೆ ಮತ್ತು ಆಟ ಬೇರೆ, ಬೇರೆಯಲ್ಲ, ಕಲಿಕೆ ಆಟವಾಗಬೇಕು, ಆಟ ಮತ್ತು ಪಾಠ ಬದುಕಿಗೆ ಬೇಕಾದ ಅವಿಭಾಜ್ಯ ಅಂಗವಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಶ್ರೀಮತಿ ಸುಧಾ ಬರಗೂರು ಅವರು ನಾವು ಮಾಡುವ ಕೆಲಸ ಸಮಾಜದಲ್ಲಿ ಸ್ಥಿರಸ್ಥಾಯಿಯಾಗಬೇಕು, ಇದಕ್ಕೆ ಇಂದು ಇಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಸೌಲಭ್ಯಗಳಿಂದ ಮಕ್ಕಳ ಮನಸ್ಸು ಸ್ಥಿತಿಯಾಂತರವಾಗುತ್ತಿದ್ದು, ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳುವಳಿಕೆ ನೀಡಬೇಕು, ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು ಎಂದು ತಮ್ಮ ಹಾಸ್ಯಲಹಾರಿ ಮೂಲಕ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದ ಈ ಕಾರ್ಯಕ್ರಮ ಹೆಚ್ಚು ಅರ್ಥ ಪೂರ್ಣವಾಗಿದೆ ಎಂದರು. ವೇದಿಕೆಯಲ್ಲಿ ವೇದಿಕೆ ಕೋಶಾಧಿಕಾರಿ ಭಗೀರಥ ಜಿ, ಸಮಿತಿ ಸಂಚಾಲಕ ಹರೀಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ಮತ್ತು ಶ್ರೀಮತಿ ರಕ್ಷಾ ಇವರ ಪ್ರಾರ್ಥನೆ ಬಳಿಕ ರಮೇಶ್ ಮಯ್ಯ ಸ್ವಾಗತಿಸಿದರು. ಅಧ್ಯಕ್ಷ ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್‌ಕುಮಾರ್ ಕೊಕ್ರಾಡಿ ಮತ್ತು ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಜಯಾನಂದ ಲಾಯಿಲ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.