ಉಜಿರೆ : ತುಳು ಶಿವಳ್ಳಿ ಮಹಿಳಾ ಸ್ನೇಹ ಸಮ್ಮಿಲನ ಸಂಘಟನೆಗಳು ಧೈರ್ಯ, ಸ್ಥೈರ್ಯ ನೀಡುವ ವೇದಿಕೆಯಾಗಬೇಕು : ಶಕುಂತಲಾ ಭಟ್

Advt_NewsUnder_1
Advt_NewsUnder_1
Advt_NewsUnder_1

shivalli shaba mahila sneha sammilanaಉಜಿರೆ : ಸಂಘಟನೆಯಲ್ಲಿ ಬಲವಿದೆ. ನಾವು ಹೋಗುವ ದಾರಿ ನೇರವಾಗಿದ್ದರೆ ಪ್ರಪಂಚವೇ ತಲೆಬಾಗುತ್ತದೆ. ಪ್ರತಿಭೆ ಎಲ್ಲರಲ್ಲೂ ಇದ್ದೇ ಇದೆ. ಅವರನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ಲೋಕ ಮೆಚ್ಚುವಂತಹ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇಂತಹ ಸಂಘಟನೆಗಳು ಯುವ ಪೀಳಿಗೆಗೆ ಧೈರ್ಯ-ಸ್ಥೈರ್ಯ ನೀಡುವ ವೇದಿಕೆಗಳಾಗಬೇಕೆಂದು ಹಿರಿಯ ಮಹಿಳಾ ಸಾಹಿತಿ, ಲೇಖಕಿ ಶಕುಂತಲಾ ಭಟ್ ಹೇಳಿದರು.
ಅವರು ಆ.13ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ.)ದ ಮಹಿಳಾ ಸಂಘಟನೆಯ ವತಿಯಿಂದ ಸಮಾಜದ ಮಹಿಳಾ ಸಂಘಟನೆಗಳನ್ನು ಬಲಪಡಿಸುವ ಉದ್ದೇಶದಿಂದ ತಾಲೂಕಿನ 9 ವಲಯದ ಮಹಿಳೆಯರ ಒಗ್ಗೂಡಿವಿಕೆಗಾಗಿ ಏರ್ಪಡಿಸಲಾದ ಮಹಿಳಾ ಸ್ನೇಹ ಸಮ್ಮಿಲನದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಮಕ್ಕಳು ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗದೆ ಕೂಡು ಕುಟುಂಬದ ಸೌಹಾರ್ದ ಮನೆತನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಂತಾಗಬೇಕು. ಮನೆ ಮಕ್ಕಳಿಗೆ ಭಜನೆ, ಸಂಸ್ಕೃತಿ, ಸಂಸ್ಕಾರ, ಆಚರಣೆ, ವೈಚಾರಿಕ ಹಿನ್ನೆಲೆಗಳನ್ನು ತಿಳಿಸಿ ಅವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದರು.
ಆಶಯ ಭಾಷಣಗೈದ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ. ವೈ. ಮಂಜುಳಾ ನಾವು ಪರಿಪೂರ್ಣರಾಗಲು ಮೊದಲು ನಾವು ನಮ್ಮನ್ನು ಅರಿತುಕೊಂಡು ನಮ್ಮ ಶಕ್ತಿ, ನ್ಯೂನತೆ, ಅವಕಾಶಗಳು ಹಾಗೂ ಸವಾಲುಗಳನ್ನು ತಿಳಿದುಕೊಂಡಿರಬೇಕು. ಮಾತನಾಡುವ ಮೊದಲು ಯೋಚಿಸಿ ಮುನ್ನಡೆಯಬೇಕು ಎಂದರು.
ಸಮಿತಿಯ ಗೌರವಾಧ್ಯಕ್ಷೆ ಕುಸುಮಾ ಪಡ್ವೆಟ್ನಾಯ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಹಿಳಾ ಸಂಘಟನೆಯ ಸಂವರ್ಧನೆ ಯಿಂದ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಜ್ಞಾನವರ್ಧನೆಯಾಗಿ ಸಮ್ಮಿಲನ ಅರ್ಥಪೂರ್ಣವಾಗಿ ಯಶಸ್ವಿಯಾಗಲೆಂದು ಆಶಿಸಿದರು. ಸಮಿತಿ ಅಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಅಧ್ಯಕ್ಷತೆ ವಹಿಸಿ ಸದ್ವಿಚಾರ, ಅನುಭವ, ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಂಘಟನೆ ಸಹಕಾರಿ ಎಂದು ತಿಳಿಸಿದರು. ವೃಂದಾ ಪಡ್ವೆಟ್ನಾಯ, ವಾರಿಜ ಹರ್ಷ ಕೆದಿಲಾಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕುವೆಟ್ಟು ವಲಯ ಉಪಾಧ್ಯಕ್ಷೆ ಗೀತಾ ಗಂಗಾಧರ, ಬಂದಾರು ವಲಯ ವಲಯದ ಅರ್ಚನಾ ಸಂತೋಷ್, ಮಚ್ಚಿನ ವಲಯದ ಅನಿತಾ ಕುಕ್ಕಿಲ, ಅಳದಂಗಡಿ ವಲಯದ ಲಕ್ಷ್ಮೀ ವಿಷ್ಣು ಸಂಪಿಗೆತ್ತಾಯ, ಕೊಕ್ಕಡ ವಲಯದ ತೇಜಾವತಿ ಶಿವರಾಂ ತೋಡ್ತಿಲ್ಲಾಯ, ಧರ್ಮಸ್ಥಳ ವಲಯದ ಮನೋರಮ ತೋಳ್ಪಾಡಿತ್ತಾಯ, ಅರಸಿನಮಕ್ಕಿ ವಲಯದ ಲೀಲಾ ವೈಕುಂಠ, ನಿಡ್ಲೆ ವಲಯದ ಕುಸುಮಾ ಸತ್ಯನಾರಾಯಣ ರಾವ್, ಸಮ್ಮಿಲನ ಸಂಯೋಜಕಿ ಶೋಭಾ ಕುದ್ರೆಂತ್ತಾಯ ಉಪಸ್ಥಿತರಿದ್ದರು. ಅನ್ನ ಸಂತರ್ಪಣೆಯ ಸೇವಾಕರ್ತರಾದ ಶ್ರೀಮತಿ ಮತ್ತು ವಿಠಲ ಆಚಾರ್ಯ ದಂಪತಿಗಳನ್ನು ವಿಜಯರಾಘವ ಪಡ್ವೆಟ್ನಾಯ ದಂಪತಿಗಳು ಸಮ್ಮಾನಿಸಿದರು. ಜ್ಯೋತಿ ಗುರುರಾಜ್ ಮತ್ತು ಸುವರ್ಣ ಕುಮಾರಿ ಕಲ್ಲೂರಾಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಾಯತ್ರಿ ಶ್ರೀಧರ್ ಸ್ವಾಗತಿಸಿ, ವಾಣಿ ವಾಸುದೇವ ಸಂಪಿಗೆತ್ತಾಯ ವಂದಿಸಿದರು. ಡಾ, ಮಾಧವ ಎಂ.ಕೆ. ನಿರೂಪಣೆಯಲ್ಲಿ ಸ್ನೇಹರಂಜನೆ ಆದರ್ಶ ದಂಪತಿ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.