ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಆಟಿಡೊಂಜಿ ಕೂಟ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

gowda sanga ati kootaಬೆಳ್ತಂಗಡಿ : ಆಟಿ ಅಮವಾಸ್ಯೆ ದಿನದ ವಿಧಿವಿಧಾನಗಳು ವೈಜ್ಞಾನಿಕ ಮಹತ್ವವನ್ನು ಪದೆದುಕೊಂಡಿವೆ. ಆದರೆ ಇತ್ತೀಚೆಗೆ ನಮ್ಮ ಸಮುದಾಯದವರು ಈ ಎಲ್ಲಾ ಆಚರಣೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಗೌಡ ಸಮಾಜದ ಆಚರಣೆಗಳು ಮತ್ತು ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಮಾದರಿ ಯಾಗಿರಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ ಅಭಿಪ್ರಾಯಪಟ್ಟರು.
ಅವರು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಮಾಧವ ಗೌಡ ವಹಿಸಿಕೊಂಡಿದ್ದರು. ತಾಲೂಕು ಸಮಿತಿಯ ಅಧ್ಯಕ್ಷ ಜಿ.ಸೋಮೇ ಗೌಡ ದೀಪ ಪ್ರಜ್ವಲನಗೈದು ಉದ್ಘಾಟನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಟಿ. ಜಯಾನಂದ ಗೌಡ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಉಷಾ ಲಕ್ಷ್ಮಣ ಗೌಡ, ತಾಲೂಕು ಸಂಘದ ಕಾರ್ಯದರ್ಶಿ ಮೋಹನ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಟಿ ತಿಂಗಳಲ್ಲಿ ಉಪಯೋಗಿಸುವ ವಿವಿಧ ತಿಂಡಿ ತಿನಸುಗಳ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ಪದ್ಮಿನಿ ಪಡ್ಲಾಡಿಯವರು ಚೆನ್ನೆಮಣೆ ಆಟದ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತುಳು ಕ್ವಿಜ್ ಕಾರ್ಯಕ್ರಮವನ್ನು ದಿನಕರ ಗೌಡ ಮತ್ತು ಲೋಕೇಶ್ ಗೌಡ ನಿರ್ವಹಿಸಿದರು.
ತಾಲೂಕು ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ತಾಲೂಕು ಸಮಿತಿ ಸದಸ್ಯರಾದ ಧರ್ಣಪ್ಪ ಗೌಡ ಕೆಲ್ಲಗುತ್ತು, ತಾಲೂಕು ಯುವ ವೇದಿಕೆ ಕಾರ್ಯದರ್ಶಿ ಸುರೇಶ ಗೌಡ ಕೌಡಂಗೆ, ಗ್ರಾಮ ಸಮಿತಿ ಕಾರ್ಯದರ್ಶಿ ಜಿ. ಪ್ರದೀಪ್, ಗ್ರಾಮ ಸಮಿತಿಯ ಉಪಾಧ್ಯಕ್ಷ ಅಚ್ಚುತ ಗೌಡ ಪಡ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು| ಗುಣಶ್ರೀ ಡಿ. ಹುಣ್ಸೆಕಟ್ಟೆ ಕಾರ್ಯಕ್ರಮ ನಿರ್ವಹಿಸಿ, ಪ್ರಭಾರ ಕಾರ್ಯದರ್ಶಿ ಶಿವರಾಮ ಗೌಡ ದಾಸರಬೆಟ್ಟು ಸ್ವಾಗತಿಸಿ, ಯುವ ವೇದಿಕೆಯ ಅಧ್ಯಕ್ಷ ಬಾಬು ಗೌಡ ವಂದಿಸಿದರು.
ಗ್ರಾಮ ಸಮಿತಿ ಕೋಶಾಧಿಕಾರಿ ಜಿನ್ನಪ್ಪ ಗೌಡ ವರದಿ ವಾಚಿಸಿದರು. ಕುಮಾರಿಯರಾದ ಪೃಥ್ವಿ ಮತ್ತು ಪ್ರಜ್ಞಾ ಕುತ್ಯಾರು ಪ್ರಾರ್ಥನೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.