ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Advt_NewsUnder_1
Advt_NewsUnder_1
Advt_NewsUnder_1

kokkada akanda sankalpa dinaಕೊಕ್ಕಡ : ಹಿಂದೂ ಜಾಗರಣ ವೇದಿಕೆ ಕೊಕ್ಕಡ ಇದರ ವತಿಯಿಂದ ಅಖಂಡ ಭಾರತವು ವಿಭಜನೆಗೊಂಡ ದುರಂತದ ನೆನಪಿನಲ್ಲಿ ಮತ್ತೆ ವಿಖಂಡವಾದ ಭಾರತವನ್ನು ಒಂದು ಗೂಡಿಸಲು ಅಖಂಡ ಭಾರತ ಸಂಕಲ್ಪ ದಿನ ಜನಜಾಗೃತಿ ನಿಮಿತ್ತ ಪಂಜಿನ ಮೆರವಣಿಗೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಕ್ಕಡದ ಶ್ರೀರಾಮ ಭಜನಾ ಮಂಡಳಿಯಲ್ಲಿ ಆ.13 ರಂದು ರಾತ್ರಿ ಆಚರಿಸಲಾಯಿತು.
ಕೊಕ್ಕಡದ ವೈದ್ಯ ಡಾ. ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾಮೀ ವಿವೇಕಾನಂದರ ನುಡಿಗಳನ್ನು ನಾವಿಂದು ನೆನಪಿಸಿಕೊಂಡು ಯುವ ಶಕ್ತಿಯನ್ನು ದೇಶದ ಅಖಂಡತೆಗಾಗಿ ಒಂದು ಗೂಡಿಸುವ ಕಾರ್ಯ ನಡೆಸಬೇಕಾಗಿದೆ. ನಮ್ಮ ದೇಶದ ಅಮೂಲ್ಯ ವಿಧಾನಗಳು ವಿಶ್ವಕ್ಕೇ ಮಾದರಿಯೆನಿಸುತ್ತಿದೆ. ವಿಶ್ವಗುರು ಭಾರತವು ತನ್ನ ತುಂಡಾಗಿ ಹೋಗಿರುವ ಭಾಗಗಳನ್ನು ಮತ್ತೆ ಪಡೆದು ಜಗತ್ತಿಗೇ ಶ್ರೇಷ್ಟ ರಾಷ್ಟ್ರವಾಗುವಲ್ಲಿ ಯುವ ಸಮಾಜದ ಕೊಡುಗೆಯೂ ಅತ್ಯಮೂಲ್ಯ ಎಂದರು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ರವರು ದಿಕ್ಸೂಚಿ ಭಾಷಣ ಮಾಡಿ ಈ ದೇಶದ ಅಖಂಡತೆಯ ಬಗ್ಗೆ ಸಭೆ ನಡೆಸುವುದಿದ್ದರೆ 10 ಲಕ್ಷ ಬಾಂಡ್ ಕೊಡಬೇಕಾದ ಪರಿಸ್ಥಿತಿ ಬಂದೊದಗಿರುವುದು ದೇಶದ ದುರಂತ. ನಮ್ಮ ಅಖಂಡ ಭಾರತದ ಹಲವಾರು ಭೂಭಾಗಗಳು ಇಂದು ತುಂಡಾಗಿ ದೇಶದ್ರೋಹಿಗಳ ಪಾಲಾಗಿರುವುದರಿಂದ ಪುನ: ಅಖಂಡ ಭಾರತವನ್ನು ಕಟ್ಟಬೇಕಾದ ಹೋರಾಟ ಅನಿವಾರ್ಯ ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪದ್ಮಯ ಗೌಡರನ್ನು ಸನ್ಮಾನಿಸಲಾಯಿತು.
ಕೊಕ್ಕಡ ಹಿಂದೂ ಜಾಗರಣ ವೇದಿಕೆ ಸಂಚಾಲಕ ರುಕ್ಮಯ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ ಅಖಂಡ ಭಾರತ ಸಂಕಲ್ಪ ದಿನದ ಮಹತ್ವವನ್ನು ವಿವರಿಸಿದರು.ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಿಂದ ಪಂಜಿನ ಮೆರವಣಿಗೆಯು ಪ್ರಾರಂಭವಾಗಿ ಜೋಡುಮಾರ್ಗ ಜಂಕ್ಷನ್ ವರೆಗೆ ಸಾಗಿ ಶ್ರೀರಾಮ ಭಜನಾ ಮಂದಿರದವರೆಗೆ ನಡೆಯಿತು.
ಕೊಕ್ಕಡ ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರವಿಪ್ರಸಾದ್ ಶೆಟ್ಟಿ ಬಲ್ಯ, ಕೊಕ್ಕಡ ಡಾ. ಮೋಹನದಾಸ್ ಗೌಡ, ಮೊದಲಾದ ಪ್ರಮುಖರು ಮೆರವಣಿಗೆ ಯಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್, ಹಿಂದೂ ಜಾಗರಣ ವೇದಿಕೆ ಕೊಕ್ಕಡ ವಲಯ ಸಂಚಾಲಕ ರುಕ್ಮಯ ಮಡಿವಾಳ, ನಿವೃತ್ತ ಸೈನಿಕ ಪದ್ಮಯ ಗೌಡ, ಮೊದಲಾದವರು ಉಪಸ್ಥಿತರಿ ದ್ದರು. ಶಶಿಧರ್ ಕೊಕ್ಕಡ ಸ್ವಾಗತಿಸಿದರು, ಸೂರ್ಯನಾರಾಯಣ ರಾವ್ ಶಿಶಿಲ ವಂದಿಸಿದರು. ಜಯಂತ್ ಅಂಬರ್ಜೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.