ಮುಂಡಾಜೆಯಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ತರಬೇತಿ ಕಾರ್ಯಾಗಾರ

rastra dhvaja tharabhethiಮುಂಡಾಜೆ: ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ (ರಿ.) ಮುಂಡಾಜೆ ಇದರ ವತಿಯಿಂದ ಮುಂಡಾಜೆ ಪ.ಪೂ. ಕಾಲೇಜು ಮುಂಡಾಜೆ, ಎನ್.ಎಸ್.ಎಸ್. ಘಟಕ ಮುಂಡಾಜೆ, ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಅಂತಾರಾಷ್ಟ್ರೀಯ ರೋಟರಿ ಕ್ಲಬ್ ಬೆಳ್ತಂಗಡಿ, ಮಸ್‌ಲಕ್ ದಶಮಾನೋತ್ಸವ ಕಾರ್ಯಕ್ರಮಗಳ ಸಮಿತಿ ಇವರ ಸಹಕಾರದೊಂದಿಗೆ ಆ. 4 ರಂದು ಮುಂಡಾಜೆಯ ಕೀರ್ತಿಶೇಷ ಜಿ.ಎನ್. ಭಿಡೆ ಜನ್ಮಶತಮಾನೋತ್ಸವ ಸಭಾಂಗಣದಲ್ಲಿ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಭಾರತ್ ಸೇವಾದಲದ ರಾಜ್ಯ ತರಬೇತುದಾರ ಅಲ್ಫೋನ್ಸ್ ಪ್ರಾಂಕೋ, ಯೋಗ ಗುರು ಮತ್ತು ಭಾರತ್ ಸೇವಾದಲದ ಉಡುಪಿ ಜಿಲ್ಲಾ ಸಂಘಟಕ ಮಹೇಶ್ ಎನ್. ಪತ್ತರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದು ತರಬೇತಿ ನಡೆಸಿಕೊಟ್ಟರು. ರಾಷ್ಟ್ರ ಧ್ವಜದ ವಿನ್ಯಾಸ, ವರ್ಣಗಳು, ರಾಷ್ಟ್ರ ಧ್ವಜದ ಕಲ್ಪನೆಗಳು, ಹುಟ್ಟಿಬಂದ ರೀತಿ, ಬದಲಾವಣೆಗಳು ಆಗಿರುವ ಪರಿ, ಅದನ್ನು ಬಳಸುವ ವಿಧಾನ, ಇಳಿಸುವ ಮತ್ತು ಏರಿಸುವ ರೀತಿ, ಧ್ವಜವನ್ನು ಕಟ್ಟುವ ಬಗೆ, ಗೌರವ ನೀಡಬೇಕಾದ ಅಂಶಗಳು, ರಾಷ್ಟ್ರ ಗೀತೆ ಹಾಡುವ ಕ್ರಮ, ಧ್ವನಿಯ ಏರಿಳಿತಗಳು, ಹಾಡಬೇಕಾದ ಸೆಕೆಂಡುಗಳು ಇತ್ಯಾದಿಯಾಗಿ ಪ್ರಾತ್ಯಕ್ಷಿಕೆ ಮತ್ತು ಚಿತ್ರಗಳ ಪ್ರದರ್ಶನದ ಮೂಲಕ ಮನಮುಟ್ಟುವಂತೆ ತರಬೇತಿಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಜ್ವಾಲಿ ಡಿಸೋಜಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಅಧ್ಯಕ್ಷ ಲ| ಅಶ್ರಫ್ ಆಲಿಕುಂಞಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ. ಸುಧೀರ್ ಪ್ರಭು, ಗ್ರಾ.ಪಂ. ಮುಂಡಾಜೆ ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್, ಮಸ್‌ಲಕ್ ಕಾರ್ಯದರ್ಶಿ ಶಬೀರ್ ಬಿ.ಕೆ.ಎಚ್, ಯಂಗ್ ಚಾಲೆಂಜರ್‍ಸ್ ಸಂಚಾಲಕ ಲ| ನಾಮದೇವ ರಾವ್, ಗ್ರಾ.ಪಂ. ಸದಸ್ಯರಾದ ನಾರಾಯಣ ಗೌಡ, ಸುಮನಾ ಗೋಖಲೆ, ಅಶ್ವಿನಿ ಹೆಬ್ಬಾರ್, ಸುರೇಶ್ ಹೆಗ್ಡೆ, ಯಂಗ್ ಚಾಲೆಂಜರ್‍ಸ್ ಪದಾಧಿಕಾರಿಗಳಾದ ರಂಜಿನಿ, ವಿಜಯ ಕುಮಾರ್, ರೊ. ಬಾಬು ಪೂಜಾರಿ ಕೂಳೂರು, ಅಬ್ದುಲ್ ಮಜೀದ್, ಇವರುಗಳು ಭಾಗಿಯಾಗಿದ್ದರು. ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಉಪನ್ಯಾಸಕಿ ವಸಂತಿ ಧನ್ಯವಾದವಿತ್ತರು. ಉಪನ್ಯಾಸಕ ವೃಂದ ಮತ್ತು ಸಮೂಹ ಸಂಘಟನೆಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.