HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಾರಾಯಣಗುರು ಸಂಕೀರ್ಣದಲ್ಲಿ ವರಮಹಾಲಕ್ಷ್ಮೀ ಪೂಜೆ ವೃತ್ತಿಯನ್ನು ಲಕ್ಷ್ಮೀ ಎಂದು ಭಾವಿಸಬೇಕು: ಸುವರ್ಣ ಕುಮಾರಿ

billava sanga varamahalashmi poojeಬೆಳ್ತಂಗಡಿ: ದಿನವೂ ಪೂಜೆ ಮಾಡಿದರೆ ಸಾಲುವುದಿಲ್ಲ, ಅದರ ಜೊತೆಗೆ ಸಮಯೋಜಿತ ಕೆಲಸ ಮಾಡಿದಾಗ ಮಾತ್ರ ಲಕ್ಷ್ಮೀಯ ಕೃಪಾಕಟಾಕ್ಷ ವಾಗುತ್ತದೆ. ಎಂದು ಬೆಳ್ತಂಗಡಿ ಸ.ಪ್ರ.ದ ಕಾಲೇಜಿನ ಅರ್ಥಶಾಸ್ತ ಉಪನ್ಯಾಸಕಿ ಶ್ರೀಮತಿ ಸುವರ್ಣ ಕುಮಾರಿ ಹೇಳಿದರು
ಇವರು ಅ.8ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವದಲ್ಲಿ ನಡೆದ ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂಘ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ವರಮಹಾಲಕ್ಷೀ ವರಗಳನ್ನು ನೀಡುವವಳು. ವೃತಾಚರಣೆಯ ಮೂಲಕ ಆಕೆಯನ್ನು ಒಲಿಸಿಕೊಳ್ಳ ಬೇಕು. ಈ ಕಲಿಯುಗದಲ್ಲಿ ನಾವು ನಮ್ಮ ವೃತ್ತಿಯನ್ನೇ ಲಕ್ಷ್ಮೀ ಎಂದೇ ಭಾವಿಸಬೇಕು. ರೈತ ಭೂಮಿಯಲ್ಲಿ, ವ್ಯಾಪಾರಿ ಅವನ ವ್ಯಾಪಾರದಲ್ಲಿ ಲಕ್ಷ್ಮೀಯನ್ನು ಕಾಣಬೇಕು ಎಂದರು.
ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ ಮಾತನಾಡಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವೃತಧಾರಿಗಳನ್ನು ನೋಡಿ ಖುಷಿಯಾಗುತ್ತಿದೆ. ನಾವು ನಮ್ಮ ಆಚರಣೆಯನ್ನು ಮರೆಯದೆ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಭಗೀರಥ ಜಿ. ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇದು ಕೇವಲ ಆಚರಣೆಯಾಗಿರದೆ ಅದರ ಮಹತ್ವ ಎಲ್ಲರಿಗೂ ತಿಳಿಯುವಂತಾಗಬೇಕು, ಆಗ ಮಾತ್ರ ಅದನ್ನು ಮುಂದಿನ ಪೀಳಿಗೆಯವರು ಅನುಸರಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವಾಧ್ಯಕ್ಷೆ ವಿನೋದಿನಿ ರಾಮಪ್ಪ, ಯುವಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಉಪಸ್ಥಿತರಿದ್ದರು. ರಘುನಾಥ ಶಾಂತಿ ಬಳಗದವರಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ೧೪೬ ಮಹಿಳೆಯರು ವ್ರತಧಾರಿಗಳಾಗಿದ್ದರು. ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ತನುಜಾ ಶೇಖರ್ ಸ್ವಾಗತಿಸಿ, ಕಾರ್ಯದರ್ಶಿ ರಾಜಶ್ರೀ ರಮಣ್ ವಂದಿಸಿ, ಸುಧಾಮಣಿ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.