ಪ್ರೀತಿ – ವಾತ್ಸಲ್ಯದ ಬದುಕು ರಕ್ಷಾಬಂಧನದ ಸಂದೇಶ: ಮುನಿಶ್ರೀ

Advt_NewsUnder_1
Advt_NewsUnder_1
Advt_NewsUnder_1

venur munishree rakshabandanaವೇಣೂರು: ಪೂರ್ವಕಾಲದಲ್ಲಿ 700 ದಿಗಂಬರ ಮುನಿಗಳ ರಕ್ಷಣೆಗಾಗಿ ಪೂಜ್ಯ ಅಕಂಪನಾಚಾರ್ಯರು ರಕ್ಷೆಯನ್ನು ಕಟ್ಟಿದರೆಂಬ ಪ್ರತೀತಿ ಇದೆ. ಧರ್ಮರಕ್ಷಣೆ, ಸಹೋದರ-ಸಹೋದರಿಯತೆ ಭಾವನೆಯೊಂದಿಗೆ ಸದಾಕಾಲ ಪ್ರೀತಿ, ವಾತ್ಸಲ್ಯ ಹಾಗೂ ಸಹಕಾರದಿಂದ ಬದುಕುವುದೆಂಬುವುದೇ ರಕ್ಷಾಬಂಧನದ ಸಂದೇಶ ಎಂದು ಪುಷ್ಪಗಿರಿ ಶ್ರೀ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ ನುಡಿದರು.
ಅವರು ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವರ್ಷಾಯೋಗದಲ್ಲಿ ಜು.೧೬ ರಂದು ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ವತಿಯಿಂದ ಜರಗಿದ ಕಲಿಕುಂಡ ಯಂತ್ರಾರಾಧನೆ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.
೧೦೫ ಸುಧರ್ಮಗುಪ್ತ ಕ್ಷುಲ್ಲಕ ಮಹಾರಾಜ ಹಾಗೂ ಶ್ರೀ ಸೋಮದೇವ ಬೈಯ್ಯಾಜಿ ಮಾತನಾಡಿದರು. ಶ್ರೀ ಶ್ರೀಕಾಂತ ಬೈಯ್ಯಾಜಿ ಹಾಗೂ ಶ್ರೀ ಧರ್ಮನಾಥ ಬೈಯಾಜಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ ದಂಪತಿಗಳು ಹಾಗೂ ಪ್ರಧಾನ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ ದಂಪತಿಗಳು ಪೂಜಾಕಾರ್ಯದಲ್ಲಿ ಪಾಲ್ಗೊಂಡು ಮುನಿಶ್ರೀಯವರ ಆಶೀರ್ವಾದ ಪಡೆದರು. ಶ್ರಾವಕ ಬಂಧುಗಳು ವಿವಿಧ ಮಾದರಿಯ ರಕ್ಷೆಗಳನ್ನು ಮುನಿಶ್ರೀಯವರ ಪಿಂಛಿಗೆ ಸಮರ್ಪಿಸಿ ಆಶೀರ್ವಾದ ಪಡೆದರು. ಬಳಿಕ ಮುನಿಶ್ರೀಯವರೊಂದಿಗೆ ಪ್ರಶ್ನಾಮಂಚ್ ಕಾರ್ಯಕ್ರಮ ಜರಗಿತು. ನವೀನ್‌ಚಂದ್ ಬಳ್ಳಾಲ್, ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷರುಗಳಾದ ಉದಯ ಕುಮಾರ್ ಸೇಮಿತ, ಬಿ. ರತ್ಮವರ್ಮ ಇಂದ್ರ ಬಜಿರೆ, ವೇಣೂರು ಜೈನ್ ಮಿಲನ್, ಬಾಹುಬಲಿ ಯುವಜನ ಸಂಘ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಸಹಕರಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.