ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಅಭಿವೃದ್ದಿ: ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು

Advt_NewsUnder_1
Advt_NewsUnder_1
Advt_NewsUnder_1

matrushri mugera sanga indabettu udhgataneಇಂದಬೆಟ್ಟು : ಮಾತೃಶ್ರೀ ಮುಗೇರ ಸಂಘ ಇಂದಬೆಟ್ಟು ಇದರ ಉದ್ಘಾಟನಾ ಸಮಾರಂಭ ಮತ್ತು ಮುಗೇರ ಜನಾಂಗದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಜು. 30 ರಂದು ಗ್ರಾ. ಪಂ. ಸಭಾಂಗಣ ಇಂದಬೆಟ್ಟುವಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುರೇಶ ದೇವನಾರಿ ಅಧ್ಯಕ್ಷರು ಮುಗೇರ ಸಂಘ ಇಂದಬೆಟ್ಟು ಇವರು ವಹಿಸಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನಿರ್ವಹಿಸಿ, ಸಮುದಾಯವು ಶಿಕ್ಷಣ ಮತ್ತು ಸಂಘಟನೆ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಶಿಕ್ಷಣದಲ್ಲಿ ಸಮಾಜದ ಉನ್ನತಿ ಅಡಗಿದೆ. ಶಿಕ್ಷಣ ಮತ್ತು ಸಂಘಟನೆಗೆ ಒತ್ತು ನೀಡುವ ಮೂಲಕ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಸಿ.ಕೆ.ಚಂದ್ರಕಲಾ ಮಾಜಿ ಅಧ್ಯಕ್ಷರು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ದ.ಕ. ಜಿಲ್ಲಾ ಪಂಚಾಯತ್ ಇವರು ಮಾತನಾಡುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಶಿಕ್ಷಣ ಪಡೆದು ಸಂಘಟಿತರಾಗಿ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಬೇಕು. ಮುಗೇರ ಜನಾಂಗದವರು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಕೊಳ್ಳಬೇಕು. ಯುವಜನಾಂಗ ಸ್ಪೂರ್ತಿದಾಯಕರಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರೆನೀಡಿದರು. ಇನ್ನೋರ್ವ ಅತಿಥಿ ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಮಾತನಾಡುತ್ತಾ ಜಾತಿ, ಅಸ್ಪ್ರಶ್ಯತೆಯ ಸಂಕೋಲೆಯನ್ನು ತೊರೆದು, ಕೀಳರಿಮೆ ಬಿಟ್ಟು ಉತ್ತಮ ಜೀವನ ನಡೆಸಬೇಕೆಂದರು.
ಇನ್ನೋರ್ವ ಅತಿಥಿ ಸೌರಭ ರತ್ನ, ರಾಮ ಪಿ.ಸಾಲ್ಯಾನ್, ಮುಗೇರ ಜನಾಂಗದ ಮುಖಂಡರಾದ ವಿಜಯ ವಿಕ್ರಮ್, ಗ್ರಾಮ ಪಂಚಾಯತು ಉಪಾಧ್ಯಕ್ಷ ಇಬ್ರಾಹಿಂ, ಸದಸ್ಯ ಸಂಜೀವ ಗೌಡ ಮನ್ನಡ್ಕ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಮುಗೇರ ಸಮುದಾಯದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯೆ ಶಿಲ್ಪಾ ಸ್ವಾಗತಿಸಿದರು.
ಕು| ಹರಿಣಾಕ್ಷಿ ತಂಡದವರಿಂದ ಪ್ರಾರ್ಥನೆ ನಡೆಯಿತು. ಸುರೇಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.