ಮುಂದಕ್ಕೆ ಎಸ್‌ಡಿಪಿಐ ಸಹಾಯವಿಲ್ಲದೆ ರಾಜ್ಯದಲ್ಲಿ ಸರಕಾರ ಇಲ್ಲದ ಸ್ಥಿತಿ ಬರಲಿದೆ ಗುರುವಾಯನಕೆರೆಯಲ್ಲಿ ಎಸ್‌ಡಿಪಿಐ ಬಸ್ಟ್ಯಾಂಡ್ ಉದ್ಘಾಟಿಸಿ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಭವಿಷ್ಯ

Advt_NewsUnder_1
Advt_NewsUnder_1
Advt_NewsUnder_1

SDPI Bus stendಗುರುವಾಯನಕೆರೆ: ಎಸ್‌ಡಿಪಿಐ ನ್ಯಾಯ ಮತ್ತು ಸಮಾನತೆಯ ಪಕ್ಷ, ನಮ್ಮ ಪಕ್ಷ ರಾಜ್ಯದ ಮೂರನೇ ಅತ್ಯಂತ ಪ್ರಮುಖ ಪಕ್ಷವಾಗಿ ಮೂಡಿಬರುತ್ತಿದ್ದು ಮುಂದಿನ ಚುನಾವಣೆಯಲ್ಲಿ ಭವಿಷ್ಯದ ಆಡಳಿತಗಾರರನ್ನು ನಿರ್ಧರಿಸುವ ಪಕ್ಷವಾಗಿ ಹೊರಹೊಮ್ಮಲಿದೆ. ನಮ್ಮ ಪಕ್ಷಕ್ಕೆ ಜಾತಿ, ಧರ್ಮ ಎಂಬ ತಾರತಮ್ಯವಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದರು.
ಗುರುವಾಯನಕೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಎಸ್‌ಡಿಪಿಐ ವತಿಯಿಂದ ನೂತನವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಆ. 6 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ ಮಾತನಾಡಿದ ರಾಜ್ಯ ಉಪಾಧ್ಯಕ್ಷ ದೇವನೀರು ಪುಟ್ನಂಜಯ್ಯ, ರಾಜ್ಯದ ರಾಜಕೀಯ ಸ್ಥಿತಿ ಹದಗೆಟ್ಟಿದೆ, ರಾಜಕೀಯ ಶಿಕ್ಷಣ ಆರೋಗ್ಯ ಕ್ಷೇತ್ರಗಳು ವ್ಯಾಪಾರಿ ದಂಧೆಗಳಾಗಿವೆ, ದಲಿತರ ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿದೆ, ಅಧಿಕಾರ ಬಲಾಢ್ಯರ ಕೈಯ್ಯಲ್ಲಿದ್ದು ಕೋಮುವಾದಿ, ದೇಶದ್ರೋಹಿಗಳು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಆದ್ದರಿಂದ ಎಸ್‌ಡಿಪಿಐ ಗೆ ಬೆಂಬಲಿಸಿದರೆ ಪರ್ಯಾಯ ಪರಿಶುದ್ಧ ರಾಜಕೀಯ ಬರಲಿದೆ ಎಂದರು.
ಸರಕಾರದ ಸಹಾಯವಿಲ್ಲದೆ ಕಾರ್ಯಕರ್ತರೇ ಚಂದಾ ಎತ್ತಿ ಇಲ್ಲಿ ಸಾಮಾಜಿಕ ಪ್ರಯೋಜನವಾಗುವ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ತಾ| ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಅಬ್ದುಲ್ ಲೆತೀಫ್ ಪುತ್ತೂರು, ರಿಯಾಝ್ ಪರೆಂಗಿಪೇಟೆ, ಅಬ್ರಹಾರ್ ಪಟೇಲ್, ಅಕ್ರಂ ಹಸನ್, ಅತಾವುಲ್ಲಾ ಜೋಕಟ್ಟೆ, ನವಾಝ್ ಪೆರಾಲ್ದರಕಟ್ಟೆ, ವನಾಝ್ ಉಲ್ಲಾಲ್, ರಿಯಾಝ್ ಮದ್ದಡ್ಕ, ಇಕ್ಬಾಲ್ ಬಂಗೇರಕಟ್ಟೆ, ಶುಕೂರ್ ಕುಪ್ಪೆಟ್ಟಿ, ಅಬ್ದುಲ್ ರಹಿಮಾನ್ ಗುರುವಾಯನಕೆರೆ, ಅಶ್ರಫ್ ಗುರುವಾಯನಕೆರೆ ಮೊದಲಾದವರು ಉಪಸ್ಥಿತರಿದ್ದರು. ತಂಗುದಾಣ ನಿರ್ಮಾಣಕ್ಕೆ ಕಾರ್ಯಕರ್ತರ ಜೊತೆಗೆ ಖಲಂದರ್ ಅವರೂ ಹೆಚ್ಚಿನ ಸಹಾಯ ಒದಗಿಸಿಕೊಟ್ಟಿದ್ದರು. ನಿಸಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.