ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ivan madantyar1ಹಣದ ಶ್ರೀಮಂತಿಕೆಯಿಂದ ವಿದ್ಯಾರ್ಜನೆ ಬರುವುದಿಲ್ಲ. ವಿದ್ಯಾರ್ಜನೆ ಸಮಯದಲ್ಲಿ ಕಷ್ಟಪಟ್ಟು ಅಭ್ಯಾಸಿಸಿ ಕಲಿತಾದ ಭವಿಷ್ಯ ಉಜ್ಜಳವಾಗಿ ರೂಪುಗೊಳ್ಳುತ್ತದೆ. -ಐವನ್ ಡಿಸೋಜ, ರಾಜ್ಯ ಸರ್ಕಾರದ ಮುಖ್ಯಸಚೇತಕ

ಮಡಂತ್ಯಾರು: ನಮ್ಮ ದೇಶದಲ್ಲಿ ಎಲ್ಲಾ ಶಿಕ್ಷಣ ಕೋರ್ಸ್‌ಗಳಿಗೂ ಬೇಡಿಕೆ ಇದೆ. ಸಾಧನೆಯ ಜೊತೆ ಆತ್ಮವಿಶ್ವಾಸವಿರಿಸಿ ವಿದ್ಯಾರ್ಜನೆಯಲ್ಲಿ ತೊಡಗಿಸಿದಾಗ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದರ ಜೊತೆಗೆ ವ್ಯಕಿತ್ವ ವಿಕಸನಕ್ಕೆ ಅವಕಾಶ ನೀಡುತ್ತಿರುವ ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ಮಾದರಿ ಕಾಲೇಜು ಆಗಿ ಮೂಡಿಬರಲಿ ಎಂದು ರಾಜ್ಯ ಸರ್ಕಾರದ ಮುಖ್ಯಸಚೇತಕ ಐವನ್ ಡಿಸೋಜ ಅಭಿಪ್ರಾಯ ಪಟ್ಟರು.
ಅವರು ಆ. 9ರಂದು ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ 2017-18ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಪಠ್ಯೇತರ ಚಟುಚಟಿಕೆಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಉತ್ತಮ ನಾಯಕನ ಆಯ್ಕೆ ದೇಶಕ್ಕೆ ದೊಡ್ಡ ಸವಾಲು ಆಗಿದೆ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ನಾಯಕನ ಆಯ್ಕೆಗೆ ಅವಕಾಶ ಲಭಿಸಿದೆ. ಪ್ರತಿಯೊಂದು ಕ್ಷಣಗಳಲ್ಲಿ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ತಮಿಳುನಾಡಿನ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಲಿತ ಎಪಿಜೆ ಅಬ್ದುಲ್ ಕಲಾಂ ಅವರು ದೇಶದ ಪ್ರತಿಷ್ಠಿತ ವಿಜ್ಞಾನಿಯಾಗಿ ಗುರುತಿಸಿಕೊಂಡರು. ಶಿಕ್ಷಣಕ್ಕೆ ಸಾಧನೆ ಮುಖ್ಯವೇ ಹೊರತು ನಾವು ಕಲಿಯುತ್ತಿರುವ ಕಾಲೇಜು ಅಲ್ಲ ಎಂದರು.
ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೆರಾ ವಿದ್ಯಾರ್ಥಿಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಸೆಕ್ರೆಡ್‌ಹಾರ್ಟ್ ಸಮೂಹ ಸಂಸ್ಥೆಗಳ ಸಂಚಾಲಕ ಫಾ| ಬೆಸಿಲ್ ವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೆಕ್ರೆಡ್ ಹಾರ್ಟ್ ಪ್ಯಾರಿಸ್ ಕೌನ್ಸಿಲ್‌ನ ಅಧ್ಯಕ್ಷ ರೊನಾಲ್ಡ್ ಸಿಕ್ವೆರಾ, ಪಿಟಿಎ ಅಧ್ಯಕ್ಷ ಮಾದವ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಅಲ್ಬುಕರ್ಕ್ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಿರ್ದೇಶಕ ವಿನ್ಸೆಂಟ್ ಡಿಸೋಜ ಸ್ವಾಗತಿಸಿ ವಿದ್ಯಾರ್ಥಿನಿ ಕು| ಅಕ್ಷತಾ ವಂದಿಸಿದರು. ವಿದ್ಯಾರ್ಥಿ ಸ್ಟೆಫಿ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.