ಜಲ ಸಂರಕ್ಷಣೆಗೆ ನರೇಗಾ ಯೋಜನೆಯಲ್ಲಿ ಕ್ರಿಯಾಯೋಜನೆ : ತಾಲೂಕಿನಲ್ಲಿ ಅಂತರ್ಜಲಕ್ಕೆ ಪೂರಕವಾಗಿ 232 ಬಾವಿಗಳ ನಿರ್ಮಾಣ

Narega wellನೀರಿನ ಆಶ್ರಯಕ್ಕಾಗಿ ಎಲ್ಲ ಕಡೆ ಕೊಳವೆ ಬಾವಿಗಳ ಕೊರೆಯುವಿಕೆ ಅಧಿಕಗೊಂಡಿದ್ದು ಇದರಿಂದ ಭೂಮಿಯ ಅಂತರ್ಜಲ ಮಟ್ಟ ತೀರಾ ಪಾತಾಳಕ್ಕಿಳಿದು ಅಪಾಯಕಾರಿ ಭವಿಷ್ಯ ನಿರ್ಮಾಣವಾಗುತ್ತಿದೆ. ಈ ಗಂಭೀರ ವಿಚಾರದ ನಡುವೆಯೇ ಬೆಳ್ತಂಗಡಿ ತಾಲೂಕಿನಲ್ಲಿ ಎಚ್ಚೆತ್ತುಕೊಂಡಿರುವ ಇಚ್ಛಾಶಕ್ತಿಯುಳ್ಳ ಅಧಿಕಾರಿಗಳು ಮತ್ತು ಕರ್ತವ್ಯಪ್ರಜ್ಞೆಯುಳ್ಳ ಕೆಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) 232 ಬಾವಿಗಳನ್ನು ತೋಡುವ ಕಾಮಗಾರಿ ಯನ್ನು ಕೈಗೆತ್ತಿಕೊಂಡು ಮಾದರಿಯೊಂದನ್ನು ತೋರಿಸಲಾಗಿದೆ.
ಯೋಜನೆಯಂತೆ ತಾಲೂಕಿನ 48 ಗ್ರಾ.ಪಂಚಾಯತ್‌ಗಳಲ್ಲಿ ಮಚ್ಚಿನ ಗ್ರಾ.ಪಂ. ಹೊರತುಪಡಿಸಿ ಉಳಿದ ಎಲ್ಲಾ ಪಂಚಾಯತ್‌ಗಳಲ್ಲೂ ಕನಿಷ್ಟದಿಂದ ಗರಿಷ್ಟ ಮಟ್ಟದಲ್ಲಿ ತೆರೆದ ಬಾವಿಗಳನ್ನು ತೋಡಲಾಗಿದೆ.
2017-18 ರಲ್ಲಿ ಅತ್ಯಂತ ಪ್ರಮುಖ ಯೋಜನೆಯಾಗಿ ಕೆರೆಗಳ ಅಭಿವೃದ್ಧಿ, ಬಾವಿಗಳ ನಿರ್ಮಾಣ, ಕಿಂಡಿ ಅಣೆಕಟ್ಟುಗಳ ರಚನೆ, ಕೊಳವೆ ಬಾವಿ ಗಳಿಗೆ ಜಲಮರುಪೂರಣ, ಮಳೆ ಕೊಯ್ಲು ಇತ್ಯಾಧಿಯನ್ನು ಉದ್ಯೋಗ ಖಾತರಿ ಯೋಜನೆಯಡಿ ಅಳವಡಿಸಿ ಕೊಂಡು ಅಂತರ್ಜಲ ಮಟ್ಟ ಏರಿಕೆಗೆ ಕೊಡುಗೆ ನೀಡಲು
ಇಚ್ಚಿಸಲಾಗಿದೆ. ಯೋಜನೆಯಂತೆ ಈ ಬಾರಿ 18 ಬಾವಿಗಳ ಕಾಮಗಾರಿ ಅನುಷ್ಠಾನಿಸಿದ ಮರೋಡಿ ಗ್ರಾ.ಪಂ. ಪ್ರಥಮ ಸ್ಥಾನ ಪಡೆದರೆ, 11 ಬಾವಿ ನಿರ್ಮಿಸಿದ ನೆರಿಯ ಗ್ರಾಮ ದ್ವಿತೀಯ ಸ್ಥಾನಿಯಾಗಿದೆ. ತಲಾ 10 ರಂತೆ ಬಾವಿ ಕಾಮಗಾರಿ ಕೈಗೊಂಡ ನಡ, ಕಳಂಜ, ಮತ್ತು ಕುವೆಟ್ಟು ಗ್ರಾ.ಪಂ. ಗಳು ತೃತೀಯ ಸ್ಥಾನದಲ್ಲಿದೆ.
ಉಳಿದಂತೆ ಕಾಶಿಪಟ್ಣ ಮತ್ತು ಮಲವಂತಿಗೆಯಲ್ಲಿ ತಲಾ 9 ಬಾವಿಗಳು, ಮುಂಡಾಜೆ, ನಾರಾವಿ ಮತ್ತು ಉಜಿರೆಯಲ್ಲಿ ತಲಾ 8 ಬಾವಿಗಳು, ಹೊಸಂಗಡಿ ಗ್ರಾ.ಪಂ. ನಲ್ಲಿ 7 ಬಾವಿಗಳು, ಕಡಿರುದ್ಯಾವರ, ಕಲ್ಮಂಜ, ನಿಡ್ಲೆ ಮತ್ತು ಶಿಬಾಜೆ ಪಂಚಾಯತ್‌ಗಳಲ್ಲಿ ತಲಾ 6 ಬಾವಿಗಳು, ಬೆಳಾಲು, ಚಾರ್ಮಾಡಿ, ಆರಂಬೋಡಿ, ಲಾಯಿಲ, ಅಂಡಿಂಜೆ ಮತ್ತು ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ತಲಾ 5 ಬಾವಿಗಳು, ಅಳದಂಗಡಿ, ಇಂದಬೆಟ್ಟು, ಕೊಕ್ಕಡ, ಕುಕ್ಕೇಡಿ, ಪಡಂಗಡಿ, ಪಟ್ರಮೆ, ಮತ್ತು ವೇಣೂರು ಗ್ರಾ.ಪಂ. ಗಳಲ್ಲಿ ತಲಾ 4 ಬಾವಿಗಳು, ಬಳೆಂಜ, ಧರ್ಮಸ್ಥಳ, ಮಡಂತ್ಯಾರು, ನಾವೂರು, ಮತ್ತು ತೆಕ್ಕಾರು ಗ್ರಾ.ಪಂ. ಗಳಲ್ಲಿ ತಲಾ 3 ಬಾವಿಗಳು, ಅರಸಿನಮಕ್ಕಿ, ಕಣಿಯೂರು, ಕೊಯ್ಯೂರು, ಮಾಲಾಡಿ, ಪುದುವೆಟ್ಟು, ಶಿಶಿಲ ಮತ್ತು ಸುಲ್ಕೇರಿ ಗ್ರಾ.ಪಂ. ಗಳಲ್ಲಿ ತಲಾ 2 ತೆರೆದ ಬಾವಿಗಳು, ಮತ್ತು ಬಂದಾರು, ಮೇಲಂತಬೆಟ್ಟು, ಶಿರ್ಲಾಲು ಮತ್ತು ತಣ್ಣೀರುಪಂತ ಗ್ರಾ.ಪಂ. ಗಳಲ್ಲಿ ತಲಾ 1 ತೆರೆದ ಬಾವಿಗಳ ಕಾಮಗಾರಿಗಳನ್ನು ಅನುಷ್ಠಾನಿಸ ಲಾಗಿರುತ್ತದೆ.
15 ಕೊಳವೆ ಬಾವಿಗಳಿಗೆ ಜಲ ಮರುಪೂರಣ ಕಾಮಗಾರಿ :
ಇದರ ಜೊತೆಗೆ ಮಲವಂತಿಗೆ, ನಾರಾವಿ, ವೇಣೂರು ಮತ್ತು ಮಾಲಾಡಿ ಗ್ರಾ.ಪಂ. ಗಳಲ್ಲಿ ತಲಾ 2 ಕೊಳವೆಬಾವಿ ಜಲ ಮರುಪೂರಣ ಕಾಮಗಾರಿ ಕೈಗೊಳ್ಳಲಾಗಿದ್ದರೆ, ಚಾರ್ಮಾಡಿ, ಕಳೆಂಜ, ಕುವೆಟ್ಟು, ಮುಂಡಾಜೆ,
ನೆರಿಯ, ತೆಕ್ಕಾರು ಮತ್ತು ಉಜಿರೆ ಗ್ರಾ.ಪಂ. ಗಳಲ್ಲಿ ತಲಾ 1 ರಂತೆ ಕೊಳೆವೆ ಬಾವಿಗಳಿಗೆ ಜಲಮರುಪೂರಣ ಕಾಮಗಾರಿ ಕೈಗೊಳ್ಳಲಾಗಿದೆ.
10 ಪಂಚಾಯತ್‌ಗಳಲ್ಲಿ ಮಳೆ ನೀರು ಕೊಲು ಕಾಮಗಾರಿ :
ಬಂದಾರು, ಚಾರ್ಮಾಡಿ, ಮಡಂತ್ಯಾರು, ಮೇಲಂತಬೆಟ್ಟು, ಮುಂಡಾಜೆ, ನೆರಿಯ, ಪಡಂಗಡಿ, ಪಟ್ರಮೆ, ತೆಕ್ಕಾರು ಮತ್ತು ವೇಣೂರು ಗ್ರಾ.ಪಂ. ಗಳಲ್ಲಿ ತಲಾ 1 ರಂತೆ 10 ಕಡೆ ಮಳೆ ನೀರು ಕೊಯಿಲು ಕಾಮಗಾರಿ ಕೈಗೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.