ಯುವ ಬಂಟರ ವಿಭಾಗದಿಂದ ಆಟಿದ ಗಮ್ಮತ್ತ್ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

bantara sangaಗುರುವಾಯನಕೆರೆ : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಮತ್ತು ತಾ| ಮಹಿಳಾ ಬಂಟರ ವಿಭಾಗ ಇವರ ಸಹಕಾರದೊಂದಿಗೆ ತಾ| ಯುವ ಬಂಟರ ವಿಭಾಗದ ವತಿಯಿಂದ ಆ. 6 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಆಟಿದ ಗಮ್ಮತ್ತ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ ಶಿಕ್ಷಕ ಹಾಗೂ ವಿದ್ವಾಂಸರಾದ ಲ| ಬಾಬು ಶೆಟ್ಟಿ ನಾರಾವಿ ನೆರವೇರಿಸಿದರು. ಮುಕ್ತ ವಾಹಿನಿಯ ನಿರೂಪಕ ಶ್ರೀಕಾಂತ ಶೆಟ್ಟಿ ಸಂಪನ್ಮೂಲ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕ ಜಯರಾಮ ಶೆಟ್ಟಿ ಪಡಂಗಡಿ, ಕಾರ್ಯಕ್ರಮ ಸಂಚಾಲಕ ವಸಂತ ಶೆಟ್ಟಿ ಶ್ರದ್ಧಾ ಶುಭ ಕೋರಿದರು.
ವೇದಿಕೆಯಲ್ಲಿ ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಹೇಮಾವತಿ, ಯುವ ಬಂಟರ ವಿಭಾಗದ ಕಾರ್ಯದರ್ಶಿ ಅಜಿತ್ ಕುಮಾರ್ ಕೋರ್‍ಯಾರು, ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬೊಳ್ಳಾಜೆ, ಕೋಶಾಧಿಕಾರಿ ಗಿರೀಶ್ ಶೆಟ್ಟಿ ನಾಳ, ಉಪಾಧ್ಯಕ್ಷ ಕಿರಣ್ ಕುಮರ್ ಶೆಟ್ಟಿ ಜೈನ್‌ಪೇಟೆ  ಉಪಸ್ಥಿತರಿದ್ದರು.
ಯುವ ಬಂಟರ ವಿಭಾಗದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.