ಬಿಎಸ್‌ಎನ್‌ಎಲ್ ಉತ್ಸವಗೆ ಚಾಲನೆ ಮಾಸಿಕ ರೂ.49/- ಕ್ಕೆ ಲ್ಯಾಂಡ್‌ಲೈನ್ ಸಂಪರ್ಕ

bsnl ushvakke chalaneಬೆಳ್ತಂಗಡಿ : ಭಾರತ್ ಸಂಚಾರ್ ನಿಗಮ (ಬಿ.ಎಸ್.ಎನ್.ಎಲ್) ಹೊಸ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಕ್, ಎಫ್‌ಟಿಟಿಹೆಚ್ ಮತ್ತು ಮರು ಸಂಪರ್ಕ ಉತ್ಸವ ಸೇವೆಗೆ ಆ.1 ರಂದು ಬೆಳ್ತಂಗಡಿ ದೂರವಾಣಿ ಇಲಾಖೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಶಿಕ್ಷಣ ಇಲಾಖೆಯ ನಿವೃತ್ತ ಇನ್ಸ್‌ಫೆಕ್ಟರ್ ರಮಾನಂದ ರಾವ್ ಉದ್ಘಾಟಿಸಿದರು.
ಕೇವಲ 49 ರೂಪಾಯಿ ತಿಂಗಳ ಬಾಡಿಗೆಗೆ ಲ್ಯಾಂಡ್ ಲೈನ್ ಸಂಪರ್ಕ ಮೊದಲ ಒಂದು ವರ್ಷಕ್ಕೆ ಮಾಸಿಕ ರೂ.49 ಮಾತ್ರ ಹಾಗೂ ಬ್ರಾಡ್ ಬ್ಯಾಂಡ್ ತಿಂಗಳಿಗೆ ಕೇವಲ ರೂ.249/- ಮೊದಲ ಒಂದು ವರ್ಷ. ನಂತರ ಹೆಚ್ಚಿನ ಉಚಿತ ಬಳಕೆಯೊಂದಿಗೆ ಪರಿವರ್ತಿಸಲಾಗುವುದು. ಲ್ಯಾಂಡ್‌ಲೈನ್, ಬ್ರಾಡ್ ಬ್ಯಾಂಕ್ ಮತ್ತು ಕೊಂಬೋ ಗ್ರಾಹಕರಿಗೆ ಸ್ಥಾಪನಾ ಶುಲ್ಕ ಮನ್ನಾ ಹಾಗೂ ಮರು ಸಂಪರ್ಕದ ಮೊದಲ ಮಾಸಿಕ ಶುಲ್ಕವೂ ಮನ್ನಾ ಮಾಡಲಾಗುವುದು. ಇದು ಸೀಮಿತ ಅವಧಿ ಮತ್ತು ಶರ್ತಗಳೊಂದಿಗೆ ಲಭ್ಯ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಎಸ್.ಡಿ.ಇ ಗಳಾದ ಅಣ್ಣಿ ಪೂಜಾರಿ, ರಮೇಶ್ ರಾವ್, ಜೆ.ಟಿ.ಒ ವಿಜಿಲ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.