ಐ.ಸಿ.ವೈ.ಎಂ ಮಡಂತ್ಯಾರು ಘಟಕಕ್ಕೆ ಶ್ರೇಷ್ಠ ಪ್ರಶಸ್ತಿ

ICYM madanthyar prashasthiಮಡಂತ್ಯಾರು : 2016-17 ಸಾಲಿನ ಮಂಗಳೂರು ಧರ್ಮಪ್ರಾಂತ್ಯ ಮಟ್ಟದ ಶ್ರೇಷ್ಠ ಕಾರ್‍ಯಕ್ರಮ ಪ್ರಶಸ್ತಿ ಐ.ಸಿ.ವೈ.ಎಂ ಮಡಂತ್ಯಾರು ಘಟಕಕ್ಕೆ ಲಭಿಸಿದೆ. ಮಡಂತ್ಯಾರು ಚರ್ಚ್‌ಗೆ ಒಳಪಟ್ಟ ಮನೆಗಳ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿ, ಸುಮಾರು 1 ಲಕ್ಷ ಮೊತ್ತವನ್ನು ಬಡವರ ಮನೆ ರಿಪೇರಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬಡರೋಗಿಗಳಿಗೆ ಸಹಾಯ ನೀಡಲು ವಿನಿಯೋಗಿಸಲಾಗಿದೆ. ಮಂಗಳೂರು ಧರ್ಮಪ್ರಾಂತ್ಯದ ವಿಗಾರ್ ಜೆರಾಲ್, ಮೋ ಡೆನಿಸ್ ಪ್ರಭು ಪ್ರಶಸ್ತಿ ಪ್ರಧಾನ ಮಾಡಿದರು. ಸತತ 2 ವರ್ಷಗಳಿಂದ ಮಂಗಳೂರು ಧರ್ಮ ಪ್ರಾಂತ್ಯ ಮಟ್ಟದಲ್ಲಿ ಶ್ರೇಷ್ಠ ಘಟಕ ಪ್ರಶಸ್ತಿ ಪಡೆದ ಬೆಳ್ತಂಗಡಿ ವಲಯದ ಏಕೈಕ ಘಟಕ, ಮಂಡಂತ್ಯಾರು ಘಟಕ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.