ಸಂಘಟನೆಗಳು ಇರುವುದು ಅಸ್ತಿತ್ವಕ್ಕಾಗಿಯೇ ಹೊರತು ಸಂಘರ್ಷಕ್ಕಲ್ಲ: ಚಿದಾನಂದ ಬೈಲಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ujire gowdara yane okkaliga sanga da maha sabhe 1ಒಕ್ಕಲಿಗ ಸಮುದಾಯವು ಸಾವಿರಾರು ವರ್ಚಗಳ ಇತಿಹಾಸವನ್ನು ಹೊಂದಿದೆ. ಸಂಘಟಣೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. – ಚಿದಾನಂದ ಬೈಲಾಡಿ
ಸಂಘಕ್ಕೆ ನಿವೇಶನ ಮಾಡಿಕೊಡುವಲ್ಲಿ ನನ್ನ ಸಹಕಾರ ಸದಾ ಇದೆ. – ಪ್ರಕಾಶ್ ಗೌಡ ಅಪ್ರಮೇಯ
ಹಿಂದಿನ ಕಾಲದಲ್ಲಿ ಆಟಿ ತಿಂಗಳ ಆಹಾರಕ್ಕಾಗಿ ಪಡುವ ಕಷ್ಟದ ದಿನಗಳನ್ನು ನೆನಪಿಸಿದರು. – ತಾ| ಅಧ್ಯಕ್ಷ ಜಿ. ಸೋಮೇ ಗೌಡ
ಉಜಿರೆ ಕಾರ್ಯಕ್ರಮ ತಾ| ಸಮಿತಿಗೆ ಪ್ರೇರಣ ಶಕ್ತಿಯಾಗಿದೆ. ತಾಲೂಕಿನ ಪ್ರತಿ ಮನೆಯವರು ತಾಲೂಕು ಸಂಘದಲ್ಲಿ ಅಜೀವ ಸದಸ್ಯರಾಗಬೇಕು. – ತಾ| ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ
ಪ್ರತೀ ಗ್ರಾಮ ಮಟ್ಟದಲ್ಲಿ ಯುವ ಘಟಕ ರಚನೆಯಾಗಬೇಕು. ನವಂಬರ್‌ನಲ್ಲಿ ತಾಲೂಕು ಯುವ ವೇದಿಕೆ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದ್ದು ಎಲ್ಲರೂ ಸಹಕಾರ ನೀಡಬೇಕು.
– ತಾ| ಯುವ ವೇದಿಕೆ ಅಧ್ಯಕ್ಷ ಜಯಾನಂದ ಟಿ.
ಮಹಿಳಾ ವೇದಿಕೆಯನ್ನು ಸಂಘಟಿತವಾಗಿ ಬೆಳೆಸುವ ದೃಷ್ಟಿಯಿಂದ ಒಗ್ಗಟ್ಟಾಗಿ ದುಡಿಯೋಣ. -ತಾ| ಮಹಿಳಾ ವೇದಿಕೆ ಅಧ್ಯಕ್ಷೆ ಉಷಾ ಲಕ್ಷ್ಮಣ ಗೌಡ

ಉಜಿರೆ : ಸಾವಿರಾರು ವರ್ಷಗಳ ಇತಿಹಾಸವಿರುವ ಒಕ್ಕಲಿಗರು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ದೊಡ್ಡ ಸಮುದಾಯವಾಗಿದೆ. ನಾವು ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿಗೆ ವಲಸೆ ಬಂದವರು. ನಮ್ಮ ಸಂಘಟನೆ ನಮ್ಮ ಅಸ್ತಿತ್ವಕ್ಕಾಗಿಯೇ ಹೊರತು, ಸಂಘರ್ಷಕ್ಕೆ ಅಲ್ಲ ಎಂದು ನೋಟರಿ ವಕೀಲ ಹಾಗೂ ಪುತ್ತೂರು ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.
ಅವರು ಜು.30ರಂದು ಉಜಿರೆ ಶ್ರೀ ಶಾರದ ಮಂಟಪದಲ್ಲಿ ಜರುಗಿದ ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಇದರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಸ್ಥಾನದಿಂದ ಮಾತನಾಡುತ್ತಾ ದಕ್ಷಿಣ ಕನ್ನಡದಲ್ಲಿ ಒಕ್ಕಲಿಗರು ಶೈಕ್ಷಣಿಕವಾಗಿ ಎಲ್ಲೋ ಒಂದು ಕಡೆ ಎಡವಿದ್ದೇವೆ. ನಮ್ಮ ಸಮುದಾಯದವರೂ ಐ.ಎ.ಎಸ್. ನಂತಹ ಉನ್ನತ ಹುದ್ದೆಗೆ ಏರಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ವಹಿಸಿ ನಮ್ಮ ಉಜಿರೆ ಗ್ರಾಮ ಸಮಿತಿಯು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಂದಿನ ಕಾರ್ಯಕ್ರಮವೂ ಮಾದರಿಯಾಗಿ ನಡೆಯುವುದಕ್ಕೆ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಮೋಹನ್ ಗೌಡ ಮಾತನಾಡಿ, ಉಜಿರೆ ಗ್ರಾಮದ ವಾರ್ಷಿಕ ಮಹಾಸಭೆ ಕಾರ್ಯಕ್ರಮವು ತಾಲೂಕು ಸಮಾವೇಶವನ್ನು ನೆನಪಿಸುವಂತಿದೆ. ಹಾಗೂ ತಾಲೂಕು ಸಮಿತಿಗೆ ಒಂದು ಪ್ರೇರಣಾ ಶಕ್ತಿ ಎಂದು ಭಾವಿಸುತ್ತೇನೆ. ಸಂಘದ ವತಿಯಿಂದ ವಾಣಿ ಶಿಕ್ಷಣ ಸಂಸ್ಥೆ ಇದ್ದು, ಇಲ್ಲಿ ಸುಮಾರು ೧೮೦೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರು.
ತಾಲೂಕು ಯುವ ವೇದಿಕೆ ಅಧ್ಯಕ್ಷ ಜಯಾನಂದ ಟಿ. ಯವರು ಮಾತನಾಡಿ, ಪ್ರತೀ ಗ್ರಾಮ ಮಟ್ಟದಲ್ಲಿ ಯುವ ಘಟಕ ರಚನೆಯಾಗಬೇಕು ಎಂದರು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ ಮಾತನಾಡಿ ವಾಣಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿದರು.
ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಉಷಾ ಲಕ್ಷ್ಮಣ ಗೌಡ ಮಾತನಾಡಿ ಶುಭಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಸ್ಥಾಪಕ ಸದಸ್ಯ, ನಿವೃತ್ತ ಶಿಕ್ಷಕ ಉಜಿರೆ ದೇವಪ್ಪ ಗೌಡರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವಿಶೇಷ ಆಕರ್ಷಣೆಯಾಗಿ ಒಕ್ಕಲಿಗರ ಸಂಪ್ರದಾಯದಲ್ಲಿ ಗುಳಿಗ ದೈವಾರಾಧನೆ ಮತ್ತು ಅಗೆಲ್ ಸೇವೆಯ ಪ್ರಾತ್ಯಕ್ಷತೆಯನ್ನು ಹರ್ಷನಿಕೇತನ ಧರ್ಣಪ್ಪ ಗೌಡ ಇವರ ಸಂಯೋಜನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಚೇತನಾ ಹರಿಶ್ಚಂದ್ರ ಗೌಡ, ಯುವ ವೇದಿಕೆ ಅಧ್ಯಕ್ಷ ಅಕ್ಷಯ್ ಕುಮಾರ್, ಕಾರ್ಯದರ್ಶಿ ಶೈಲೇಶ್ ಧರಣಿ, ತಾ| ಯುವ ವೇದಿಕೆ ಪ್ರ. ಕಾರ್ಯದರ್ಶಿ ಸುರೇಶ್ ಕೌಡಂಗೆ, ತಾ| ಉಪಾಧ್ಯಕ್ಷೆ ಜಯಶ್ರೀ ಡಿ.ಎಂ. ಗೌಡ, ಸವಿತಾ ಜಯದೇವ್, ತಾ| ಸಮಿತಿ ಹಿರಿಯ ಸದಸ್ಯ ಧರ್ಣಪ್ಪ ಗೌಡ ಬೆಳ್ತಂಗಡಿ, ಮಹಿಳಾ ವೇದಿಕೆ ಸದಸ್ಯರು, ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕು| ವಿದ್ಯಾ ಬಳಗದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಜಿರೆ ಸಂಘದ ಉಪಾಧ್ಯಕ್ಷ ರಾಮಯ್ಯ ಗೌಡ ಸ್ವಾಗತಿಸಿದರು. ಉಪನ್ಯಾಸಕ ಆನಂದ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಗೋಪಾಲಕೃಷ್ಣ ಜಿ.ಕೆ. ವರದಿ ವಾಚಿಸಿದರು, ಕೋಶಾಧಿಕಾರಿ ಶೇಖರ ಗೌಡ ಲೆಕ್ಕಪತ್ರ ಮಂಡನೆ, ಸಂಘದ ಜೊತೆ ಕಾರ್ಯದರ್ಶಿ ಧರಣಿ ಧರ್ಣಪ್ಪ ಗೌಡ ಧನ್ಯವಾದವಿತ್ತರು. ಅಧ್ಯಾಪಕ ಧರ್ಮೇಂದ್ರ ಮತ್ತು ರೇಶ್ಮಾ ಲಕ್ಷ್ಮಣ ಗೌಡ ನಿರೂಪಿಸಿದರು.
ಮದ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಂತರ ಮಹಾಸಭೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.