ನಿಡಿಗಲ್‌ನಲ್ಲಿ ಮನರಂಜಿಸಿದ ಆಟಿಡ್ ಕಂಡೊಡೊಂಜಿ ದಿನ ಆಟಿ-ಕೂಟದಲ್ಲಿ ತುಳುನಾಡಿನ ಸಂಸ್ಕೃತಿ-ಪರಂಪರೆಯ ದರ್ಶನ : ಸ್ವಾಮೀಜಿ

nidigal atid kandodu onji dinaಬೆಳ್ತಂಗಡಿ : ದ.ಕ. ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಮಡಿವಾಳ ಸಮಾಜ ಬಾಂಧವರಿಗಾಗಿ ಜು.30 ರಂದು ನಡೆದ ಆಟಿಯ ತಿಂಡಿತಿನಸುಗಳ ಪ್ರದರ್ಶನ ಮತ್ತು ಕೆಸರುಗದ್ದೆ ಕ್ರೀಡಾಕೂಟ ಆಟಿಡ್ ಕಂಡೊಡೊಂಜಿ ದಿನ ನೆರೆದ ಜನರ ಮನರಂಜಿಸಿತು.
ಸಮಾರಂಭವನ್ನು ಮೂಡಬಿದ್ರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಉದ್ಘಾಟಿಸಿ, ಆಶೀರ್ವದಿಸಿ, ನಮ್ಮ ಪರಂಪರೆ, ಸಂಸ್ಕೃತಿಗಳು ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಯುವಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಸಾವಿರಾರು ದೈವ-ದೇವರುಗಳು ನೆಲೆಬೀಡಾದ ಈ ತುಳುನಾಡಿನಲ್ಲಿ ಕೃಷಿ ನಾಶದೊಂದಿಗೆ ನಮ್ಮ ಸಂಸ್ಕೃತಿಯೂ ನಾಶವಾಗುತ್ತಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಮತ್ತೊಮ್ಮೆ ತೋರಿಸುವ ಕೆಲಸ ಈ ಆಟಿಡ್ ಕಂಡೊಡೊಂಜಿ ದಿನದ ಮೂಲಕ ಆಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್ ವಹಿಸಿದ್ದರು. ಕಾಸರಗೋಡು ಜಿಲ್ಲಾ ಅಗಸ ಯಾನೆ ಮಡಿವಾಳರ ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ, ಮಂಗಳೂರಿನ ಸೂಪರಿಡೆಂಟ್ ಆಫ್ ಕಸ್ಟಮ್ಸ್ ಉಮೇಶ್ ಪುತ್ರನ್, ಮುಂಬೈನ ಉದ್ಯಮಿ ಕರುಣಾಕರ ಪುತ್ರನ್, ಉಡುಪಿ ಶ್ರೀ ವೀರಮಾಚೀದೇವ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ ಮಡಿವಾಳ, ಮುಂಬೈನ ಹೋಟೆಲ್ ಉದ್ಯಮಿ ರಾಮಣ್ಣ ಮಡಿವಾಳ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮುಂಬೈನ ಉದ್ಯಮಿ ಕರುಣಾಕರ ಪುತ್ರನ್, ಕೆಸರುಗದ್ದೆಯನ್ನು ನೀಡಿ ಸಹಕಾರ ನೀಡಿದ ಕೆಂಪಯ್ಯ ಮಡಿವಾಳ, ಕಾಂತಪ್ಪ ಮಡಿವಾಳ ನಿಡಿಗಲ್ ಮಜಲ್, ನಿವೃತ್ತರಾಗುತ್ತಿರುವ ಶಿಕ್ಷಕ ಸಂಜೀವ ಮಡಿವಾಳ ಅವರನ್ನು ಗೌರವಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ್ ಮಡಿವಾಳ ಮುಂಡಾಜೆ, ನಿಕಟಪೂರ್ವ ಅಧ್ಯಕ್ಷ ಶಶಿಧರ್ ಎಂ. ಕಲ್ಮಂಜ, ಉದ್ಯಮಿ ಕರುಣಾಕರ ಪುತ್ರನ್, ದ.ಕ. ಜಿಲ್ಲಾ ಮಡಿವಾಳರ ಸಂಘದ ಕಾರ್ಯದರ್ಶಿ ಭಾಸ್ಕರ ಬೇಕಲ್ ಬಹುಮಾನಗಳನ್ನು ವಿತರಿಸಿದರು.
ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ್ ಮಡಿವಾಳ ಮುಂಡಾಜೆ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ರಜಕ ಯೂತ್ ಅಧ್ಯಕ್ಷ ವಿಜಯ ಕುಮಾರ್ ನಿಡಿಗಲ್ ಮಜಲ್ ವಂದಿಸಿದರು. ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.