ತಾಲೂಕಿನ 5 ಪಡಿತರ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಅಳವಡಿಕೆ

naravi societyಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ 5 ಕಡೆಗಳ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಂದ್ರ ಸರಕಾರದ ಆದೇಶದಂತೆ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ತಾಲೂಕು ಆಹಾರ ಇಲಾಖೆ ವತಿಯಿಂದ ಅಳವಡಿಸಲಾಗಿದೆ ಎಂದು ಆಹಾರ ನಿರೀಕ್ಷಕ ವಿಶ್ವ ಅವರು ತಿಳಿಸಿದ್ದಾರೆ.
ಬಯೋ ಮೆಟ್ರಿಕ್ ಅಳವಡಿಕೆ ಮಾಡಿದ ನ್ಯಾಯಬೆಲೆ ಅಂಗಡಿಗಳಲ್ಲಿ ವೇಣೂರು, ಪಡಂಗಡಿ, ಕೊಕ್ಕಡ, ಮುಂಡಾಜೆ ಮತ್ತು ನಾರಾವಿ ಸೇವಾ ಸಹಕಾರಿ ಸಂಘಗಳು ಸೇರಿದೆ. ಪಡಿತರ ಅಂಗಡಿಗಳಲ್ಲಿ ತಿಂಗಳ ಕೊನೆಗೆ ಪಡಿತರ ಉಳಿದು ದುರುಪಯೋಗವಾಗುವುದನ್ನು ತಪ್ಪಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದೆ ತಾಲೂಕಿನ ಎಲ್ಲಾ ಪಡಿತರ ಅಂಗಡಿಗಳಲ್ಲೂ ಈ ವ್ಯವಸ್ಥೆ ಜಾರಿಯಾಗಲಿದೆ.
ಪಡಿತರ ಅಂಗಡಿಯಲ್ಲಿ ಅಳವಡಿಸಲಾದ ಬಯೋಮೆಟ್ರಿಕ್‌ನಲ್ಲಿ ಗ್ರಾಹಕರ ಬೆರಳಚ್ಚನ್ನು ಪಡೆದು ಅಂಗಡಿಯವರು ಇನ್ನು ಮುಂದೆ ಪಡಿತರ ನೀಡಬೇಕು. ಬೆರಳಚ್ಚು ಪಡೆಯದೆ ಪಡಿತರ ನೀಡುವ ಹಾಗಿಲ್ಲ. ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಅಳವಡಿಕೆ ಮಾಡಿದ್ದರಿಂದ ಆರಂಭದಲ್ಲಿ ಕೆಲವೊಂದು ಅಂಗಡಿಗಳಲ್ಲಿ ಪಡಿತರಕ್ಕೆ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಯಿತು. ಪಡಿತರ ಅಂಗಡಿಗಳಲ್ಲಿ ಗ್ರಾಹಕ ಪಡಿತರಪಡೆದಿದ್ದಾನೆಯೇ, ಇಲ್ಲವೇ ಎಂಬುದು ಇದರಿಂದ ಗೊತ್ತಾಗುತ್ತದೆ.
ರಾಜ್ಯದ ಕೆಲವೊಂದು ಭಾಗಗಳಲ್ಲಿ ಅಂಗಡಿಗಳಲ್ಲಿ ತಿಂಗಳ ಕೊನೆಯಲ್ಲಿ ಉಳಿಯುವ ಪಡಿತರ ವಸ್ತುಗಳು ದುರುಪಯೋಗವಾದ ಹಿನ್ನಲೆಯಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಒಂದು ಪಡಿತರ ಅಂಗಡಿಯಲ್ಲಿ ಒಂದು ತಿಂಗಳಲ್ಲಿ ಎಷ್ಟು ಮಂದಿ ಪಡಿತರ ಪಡೆದುಕೊಂಡಿದ್ದಾರೆ. ಎಷ್ಟು ಪಡಿತರ ಉಳಿಯಿತು ಎಂಬ ಸ್ವಷ್ಟ ಚಿತ್ರಣ ದೊರೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.