ಕ್ಯೂರ್ ಇಟ್ ಮಲ್ಟಿಸ್ಪೆಷಾಲಿಟಿ ಹೋಮಿಯೋಪತಿ ಕ್ಲಿನಿಕ್ ಶುಭಾರಂಭ

madanthyar cure it multi hospital openingಮಡಂತ್ಯಾರು : ಇಲ್ಲಿಯ ದಿವ್ಯಶಕ್ತಿ ಕಾಂಪ್ಲೆಕ್ಸ್‌ನಲ್ಲಿ ಕ್ಯೂರ್ ಇಟ್ ಮಲ್ಟಿಸ್ಪೆಷಾಲಿಟಿ ಹೋಮಿಯೋಪತಿ ಕ್ಲಿನಿಕ್ ಆ.1 ರಂದು ಶುಭಾರಂಭಗೊಂಡಿತು.
ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂ.ಫಾ| ಬಾಜಿಲ್‌ವಾಸ್ ಉದ್ಘಾಟಿಸಿ ಅಶೀರ್ವಚನ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ| ವಿಪಿನ್‌ರವರ ಪೋಷಕರಾದ ಡಾ| ಜಾನ್ ಜೇಕಬ್, ಶ್ರೀಮತಿ ಎಲ್ಸಾಮ್ಮ ಜಾಯ್, ಸಹೋದರ ಡಾ| ನಿತಿನ್ ಪಿ.ಜಾಯ್ ಉಪಸ್ಥಿತರಿದ್ದರು. ಡಾ| ಬಿಫಿನ್ ಪಿ. ಜಾಯ್ ಸ್ವಾಗತಿಸಿ ವಂದಿಸಿದರು. ಇಲ್ಲಿ ಅಲರ್ಜಿ ಸಂಬಂಧಿ-ಕೆಮ್ಮು, ಶೀತ, ಅಸ್ತಮಾ, ಚರ್ಮ ರೋಗಗಳಾದ ಎಕ್ಸಿಮಾ, ರಿಂಗ್ ವರ್ಮ್, ಮೂಳೆ, ಗಂಟು ನೋವು, ಸ್ತ್ರೀ ಸಂಬಂಧಿ ರೋಗಗಳು ಬಿಳಿ ಸೆರಗು, ಋತುಚಕ್ರದಲ್ಲಿರುವ ಏರುಪೇರು, ಮುಟ್ಟಿನ ಕೊನೆಯ ಘಟ್ಟದಲ್ಲಿನ ಏರುಪೇರು, ಮಲಬದ್ಧತೆ, ಹುಳಿತೇಗು, ಗ್ಯಾಸ್ ಟ್ರಬಲ್ ಮೊದಲಾದ ಖಾಯಿಲೆಗಳಿಗೆ ಚಿಕಿತ್ಸೆ ಇಲ್ಲಿ ಲಭ್ಯವಿದೆ ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.