ನೇಪಥ್ಯಕ್ಕೆ ಸರಿದ ಹಿರಿಯ ಕಲಾವಿದರ ಮಟ್ಟಕ್ಕೆ ಸಾಹಿತ್ಯಿಕವಾಗಿ ಬೆಳೆಯಬೇಕು

yakshabharathi truthiya varshikosavaಉಜಿರೆ : ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ಯಕ್ಷಗಾನಕ್ಕೆ ಗೌರವದ ಸ್ಥಾನವಿದೆ. ಚಿಕ್ಕ ಮೇಳದ ಮೂಲಕ ಯಕ್ಷ ಕಲೆಯನ್ನು ಮನೆ ಮನೆಗೂ ಮುಟ್ಟಿಸುವ ಕೆಲಸ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನೇಪಥ್ಯಕ್ಕೆ ಸರಿದ ಹಿರಿಯ ಶ್ರೇಷ್ಠ ಕಲಾವಿದರ ಮಟ್ಟಕ್ಕೆ ಇಂದಿನ ಕಲಾವಿದರು ಮುಟ್ಟಿಲ್ಲ. ಅಂಥವರನ್ನು ತಯಾರು ಮಾಡಿ, ಸಾಹಿತ್ಯಿಕವಾಗಿ ಬೆಳೆಯಲು ಇನ್ನಷ್ಟು ಪ್ರಯತ್ನಗಳಾಗಬೇಕು ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ನುಡಿದರು.
ಅವರು ಜು. 29 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಮಿತ್ರರು ಬೆಳ್ತಂಗಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಸೇವಾಭಾರತಿ ಅಂಗಸಂಸ್ಥೆ ಯಕ್ಷಭಾರತಿ ಕನ್ಯಾಡಿ II ಇದರ ತೃತೀಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿ ಡಾ| ಎಂ.ಎಂ. ದಯಾಕರ್ ಜ್ಞಾನಪ್ರದ ಯಕ್ಷಗಾನ ಕಲೆಯನ್ನು ಜೀವನ ಧರ್ಮವಾಗಿ ಉಳಿಸಿ ಬೆಳೆಸಬೇಕೆಂದರು.
ಸೇವಾಭಾರತಿ ಉಪಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉದ್ಯಮಿ ಮೋಹನ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗಂಗಾಧರ ಕಾಯರ್ತಡ್ಕ ವಾರ್ಷಿಕ ವರದಿ ಮಂಡಿಸಿದರು. ಚಂದ್ರಮೋಹನ ಮರಾಠೆ ಸಮ್ಮಾನಿತರನ್ನು ಅಭಿನಂದಿಸಿ, ಶಿತಿಕಂಠ ಭಟ್ ಸಮ್ಮಾನ ಪತ್ರ ವಾಚಿಸಿದರು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿ, ವಂದಿಸಿದರು. ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ರೀಕೃಷ್ಣಲೀಲೆ-ಕಂಸವಧೆ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಅತಿಥಿ ಕಲಾವಿದರಾಗಿ ತುಳು ಚಲನಚಿತ್ರರಂಗದ ಭೋಜರಾಜ ವಾಮಂಜೂರು ಮತ್ತು ಅರವಿಂದ ಬೋಳಾರ್ ಪಾತ್ರ ನಿರ್ವಹಿಸಿ ಕಲಾಭಿಮಾನಿಗಳನ್ನು ರಂಜಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ನರೇಂದ್ರ ಕುಮಾರ್ ಉಜಿರೆ, ಕೃಷ್ಣ ಶೆಟ್ಟಿ ಬೆಳ್ತಂಗಡಿ ಮತ್ತು ಡಿ. ಶ್ರೀರಾಮ ಭಟ್ ಭಂಡಿಹೊಳೆ ಯವರನ್ನು ಯಕ್ಷಭಾರತಿ ಪರವಾಗಿ ಶಾಲು ಹೊದಿಸಿ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ರಕ್ಷಿತಾ ಮತ್ತು ನಿತಿನ್ ಕುಮಾರ್, ಪುಂಜಾಲಕಟ್ಟೆ ಸರಕಾರಿ ಪದವಿ ಕಾಲೇಜಿನ ಸುಚಿತ್ರಾ ಮತ್ತು ಸುಶ್ಮಿತಾರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮ್ಮಾನಿತರ ಪರವಾಗಿ ನರೇಂದ್ರ ಕುಮಾರ್, ವಿದ್ಯಾರ್ಥಿ ವೇತನ ಸ್ವೀಕರಿಸಿದವರ ಪರವಾಗಿ ನಿತಿನ್ ಕುಮಾರ್ ಉತ್ತರಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.