ಅಳದಂಗಡಿ ಲಯನ್ಸ್ ಕ್ಲಬ್ ಪದಗ್ರಹಣ ಸೇವಾ ಕಾರ್ಯಗಳಿಂದ ಆತ್ಮ ತೃಪ್ತಿ : ಲ| ದೇವದಾಸ್

aladangady lions clubಅಳದಂಗಡಿ : ತನ್ನ ದುಡಿತದ ಒಂದಂಶವನ್ನು ಸೇವಾ ರೂಪದಲ್ಲಿ ಇತರರಿಗೆ ನೀಡಿದರೆ ದೇವರು ಮೆಚ್ಚುತ್ತಾನೆ. ಇದರಿಂದ ನಮಗೂ ಮನ ತೃಪ್ತಿಯಾಗುತ್ತದೆ ಇಂತಹ ಕಾರ್ಯವನ್ನು ಎಲ್ಲಾ ಲಯನ್ಸ್ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಲಯನ್ಸ್ ಜಿಲ್ಲೆ ಇದರ ಪ್ರಥಮ ಉಪ ರಾಜ್ಯಪಾಲ ಲ| ದೇವದಾಸ್ ಭಂಡಾರಿ ಹೇಳಿದರು.
ಅವರು ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ಜು.27 ರಂದು ಅಳದಂಗಡಿ ಲಯನ್ಸ್ ಸಂಸ್ಥೆ ಇದರ 2017-18ರ ಅಧ್ಯಕ್ಷರಾಗಿ ನಿಯುಕ್ತರಾಗಿರುವ ವಿಜಯ ಕುಮಾರ್ ಜೈನ್ ಮತ್ತು ತಂಡದವರ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಭೋದಕರಾಗಿ ಭಾಗವಹಿಸಿ ಮಾತಾನಾಡಿದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಇಗರ್ಜಿಯ ಧರ್ಮಗುರು ಅಬೆಲ್ ಲೋಬೊ ಭಾಗವಹಿಸಿದ್ದರು. ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ಮಾತಾನಾಡಿ ಹಿಂದೆ ಅಳದಂಗಡಿಯಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ವೀರೇಂದ್ರ-ಸುರೇಂದ್ರ ಕಂಬಳ ಮಾಡಿದ ನೆನಪು ಮಾಡಿಕೊಂಡರು. ನಿರ್ಗಮನ ಅಧ್ಯಕ್ಷ ಲ| ಸದಾನಂದ ಪೂಜಾರಿ ಸ್ವಾಗತಿಸಿ ತಮ್ಮ ಅಧಿಕಾರವಧಿಯಲ್ಲಿ ಸಹಕರಿಸಿದ ಪ್ರತಿಯೋರ್ವರಿಗೆ ಧನ್ಯವಾದ ಸಲ್ಲಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಲ| ವಿಜಯ ಕುಮಾರ್ ಜೈನ್ ವಾಚಿಸಿದರು.
ಈ ಸಂದರ್ಭ ಸೇರ್ಪಡೆಗೊಂಡ ಗೌರವ ಸದಸ್ಯ ಲ| ಶಿವಪ್ರಸಾದ ಅಜಿಲ ಹಾಗೂ ನೂತನ ಸದಸ್ಯರಾದ ಲ|ಸುಬ್ರಮಣ್ಯ ಭಟ್ ಪಿಲ್ಯ, ಲ| ಶರತ್ ಸಾಲ್ಯಾನ್, ಲ| ವೆಂಕಟೇಶ್ ಉಜಿರೆ ಇವರ ಪರಿಚಯ ಮಾಡಲಾಯಿತು. ನಿಯೋಜಿತ ಅಧ್ಯಕ್ಷ ಲ|ವಿಜಯ ಕುಮಾರ್ ಜೈನ್ ತಮ್ಮ ತಾಯಿ ಜಯವತಿ ಮತ್ತು ಸಹೋದರ ವೀರೇಂದ್ರ ಕುಮಾರ್ ಹಾಗೂ ಅತಿಥಿಗಳೊಂದಿಗೆ ೨೦೧೮ ನೇ ಸಾಲಿನ ಸೇವಾ ಕಾರ್ಯಕ್ರಮಗಳಿಗೆ ದೀಪಪ್ರಜ್ವಲನದ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿ ರಾಜ್ಯಪಾಲರ ಪ್ರತಿನಿಧಿ ಲ| ಶಿವಪ್ರಸಾದ ಹೆಗ್ಡೆ, ಪ್ರಾಂತ್ಯಧ್ಯಕ್ಷ ಲ|ನಿತ್ಯಾನಂದ ನಾವರ, ವಲಯಾಧ್ಯಕ್ಷ ಲ| ವೆಂಕಟೇಶ್ ಎಂ.ಬಿ, ಲ| ವಾಸು ಮೂಡಬಿದ್ರೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಜೈನ್, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲ| ನಿತೀಶ್ ಕುಮಾರ್, ನಾರಾವಿ ಲಯನ್ಸ್ ಅಧ್ಯಕ್ಷ ಲ|ಮುರಳಿ ಬಿ, ಮೂಡಬಿದ್ರೆ ಲಯನ್ಸ್ ಅಧ್ಯಕ್ಷ ಲ| ರಾಮಚಂದ್ರ, ಅಳದಂಗಡಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಲ|ಹಿಲಾರಿ ಫೆರ್ನಾಂಡೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ| ಹರೀಶ ಆಚಾರ್ಯ ಧ್ವಜವಂದನೆ ಸಲ್ಲಿಸಿದರು, ಲ| ಎಲೋಷಿಯಸ್ ಡಿ.ಸೋಜ ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಲ| ಸದಾನಂದ ಬಿ ಕುದ್ಯಾಡಿ, ಲ|ಸುಂದರ ಆಚಾರ್ಯ ಕುದ್ಯಾಡಿ, ಲ| ಪ್ರಶಾಂತ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಲ| ಮೆಲ್ವಿನ್, ಲ|ಪಿ.ಹೆಚ್.ಪ್ರಕಾಶ ಶೆಟ್ಟಿ, ಲ| ಧರ್ಣಪ್ಪ ಪೂಜಾರಿ, ಲ| ಶ್ರೀನಿವಾಸ ರಾವ್ , ಲ| ಜಾನ್ ಡಿ.ಸೋಜ, ಡಾ.ಎನ್. ಎಮ್ ತುಳುಪುಳೆ, ಡಾ| ಶಶಿಧರ ಡೊಂಗ್ರೆ ಮತ್ತಿತರರು ಉಪಸ್ಥಿತರಿದ್ದರು. ಚಾರ್ಟೆಡ್ ಸದಸ್ಯ ಲ| ಸಿಫ್ರಿಯಾನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷ ಲ| ವಿಜಯ ಕುಮಾರ್ ಜೈನ್ ಮಾತಾನಾಡಿ ನಾವು ಪ್ರಸಸ್ತಿಗಾಗಿ ಅಂಕಗಳಿಗಾಗಿ ಸೇವೆಯಲ್ಲಿ ಸ್ಪರ್ಧೆ ಮಾಡಲ್ಲ ನಮಗೆ ಸೇವೆಗಳು ಮಾತ್ರ ಪ್ರಧಾನವೆಂದರು. ಅಳದಂಗಡಿ ಲಯನ್ಸ್ ಕ್ಲಬ್ ನೂತನ ಕಾರ್ಯದರ್ಶಿ ಲ| ಸುಕೇಶ್ ಜೈನ್ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.