ತಾಲೂಕಿನ 65 ಮೊಹಲ್ಲಾಗಳ ಸುನ್ನೀ ಸಂಯುಕ್ತ ಜಮಾಅತ್ ಪ್ರತಿನಿಧಿಗಳ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1

Sunni samyuktha jamathಗುರುವಾಯನಕೆರೆ : ಇಸ್ಲಾಂನಲ್ಲಿ ಖಾಝಿ ಎಂಬುದು ಧಾರ್ಮಿಕ ನ್ಯಾಯಪೀಠ. ಅಲ್ಲಿಂದ ಬರುವ ತೀರ್ಪೇ ಅಂತಿಮ. ಈದುಲ್ ಫಿತರ್ ಮತ್ತು ಇತರ ಹಬ್ಬಗಳ ದಿನ ನಿಗಧಿಯಲ್ಲಿ ಅವರಿಗೆ ಅಧಿಕೃತ ಮೂಲಗಳಿಂದ ದೃಢಪಟ್ಟರೆ ಮಾತ್ರ ನಿರ್ಧಾರಗಳು ತೀರ್ಪಾಗಿ ಹೊರಬರುವುದು. ಖಾಝಿ ನೀಡಿದ ತೀರ್ಪುನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಹಕ್ಕು ಅವರನ್ನು ಅಂಗೀಕರಿಸಿದ ಮೊಹಲ್ಲಾಗಳಿಗೆ ಇರುವುದಿಲ್ಲ. ಮತ್ತು ಖಾಝಿಯ ಬದಲಾವಣೆಯ ಹಕ್ಕು ಕೂಡ ಖಾಝಿಗೆ ಬಿಟ್ಟದ್ದೇ ಹೊರತು ಕೆಲವರ ಹಿತಾಸಕ್ತಿಗಾಗಿ ಸಭೆ ಕರೆದು ಖಾಝಿ ಬದಲಾವಣೆ ಸಿಂಧುವಲ್ಲ. ಖಾಝಿಯ ತೀರ್ಮಾನವನ್ನು ಎಪಿ-ಇಕೆ ಎಂಬುದಾಗಿ ವಿಂಗಡಿಸಿ ಜನಸಾಮಾನ್ಯರಿಗೆ ಗೊಂದಲ ಮೂಡಿಸುವವರ ಬಗ್ಗೆ ಎಚ್ಚರವಿರಲಿ ಎಂದು ದ.ಕ. ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಸ್ಪಷ್ಟಪಡಿಸಿದರು.
ಆ. 1 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಸಯ್ಯಿದ್ ಕೂರತ್ ತಂಙಳ್ ಅವರನ್ನು ಖಾಝಿಯಾಗಿ ಅಂಗೀಕರಿಸಿದ ೬೫ ಮೊಹಲ್ಲಾಗಳ ಸುನ್ನೀ ಸಂಯುಕ್ತ ಜಮಾಅತ್ ಇದರ ವತಿಯಿಂದ ಗುರುವಾಯನಕೆರೆ
ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾಶರೀಫ್ ಮತ್ತು ಜುಮ್ಮಾ ಮಸೀದಿ ಸಭಾಂಗಣದಲ್ಲಿ ಜರುಗಿದ ಜಮಾಅತ್ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ವಹಿಸಿದ್ದರು. ಸಮಾವೇಶದ ಉದ್ಘಾಟನೆಯನ್ನು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ನಿರ್ವಹಿಸಿದರು. ವೇದಿಕೆಯಲ್ಲಿ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್, ಸಯ್ಯಿದ್ ಮುಹಮ್ಮದ್ ಇಂಬಿಚ್ಚಿಕೋಯ ತಂಙಳ್ ಮುರ, ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ, ಕಾಸಿಂ ಮದನಿ ಕರಾಯ, ಹೈದರ್ ಮದನಿ, ಅಬೂಬಕ್ಕರ್ ಹಾಜಿ ಮಾಲಾಡಿಪಲ್ಕೆ, ಅಬ್ಬಾಸ್ ಮದನಿ ಉಜಿರೆ, ಯಾಕೂಬ್ ಉಸ್ತಾದ್ ಪಣಕಜೆ, ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ, ಉಮರ್ ಸಖಾಫಿ ಪರಪ್ಪು, ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕ ಕಾಸಿಂ ಪದ್ಮುಂಜ, ಸುನ್ನೀ ಪ್ರಮುಖರಾದ ಎಂ.ಕೆ. ಬದ್ರುದ್ದೀನ್, ಖಾದರ್ ಹಾಜಿ ಉಜಿರ್‌ಬೆಟ್ಟು, ಅಬ್ಬಾಸ್ ಬಟ್ಲಡ್ಕ, ಲ| ಅಶ್ರಫ್ ಆಲಿಕುಂಞಿ ಮುಂಡಾಜೆ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಸಖಾಫಿ ನಾವೂರು, ಇಕ್ಬಾಲ್ ಮಾಚಾರ್, ವಝೀರ್ ಬಂಗಾಡಿ, ಅಶ್ರಫ್ ಸಖಾಫಿ ಮೂಡಡ್ಕ, ಶರೀಫ್ ಸಖಾಫಿ ಕುಪ್ಪೆಟ್ಟಿ, ಮಸ್‌ಊದ್ ಸಅದಿ ಪದ್ಮುಂಜ, ಹನೀಫ್ ಗುರುವಾಯನಕೆರೆ, ಲೆತೀಫ್ ಹಾಜಿ ಎಸ್.ಎಂ.ಎಸ್., ಹನೀಫ್ ಸಖಾಫಿ ಬಂಗೇರಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು. ಸಂಯುಕ್ತ ಜಮಾಅತ್ ಪ್ರ. ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಸೈದ್ಧಾಂತಿಕ ಸಂದೇಹಗಳ ಪ್ರಶ್ನೆಗಳಿಗೆ ಖಾಝಿಯವರು ಉತ್ತರ ನೀಡಿದರು. ಈ ಸಭೆಯಲ್ಲಿ ಸವಣಾಲು ಜಮಾಅತ್‌ಗೆ ಖಾಝಿ ಅಂಗೀಕಾರ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.