ಉಜಿರೆಯಲ್ಲಿ ಎಸ್.ಎ ಮೆಡಿಕಲ್ಸ್ ಶುಭಾರಂಭ

ujire SA medical subharambaಉಜಿರೆ : ಇಲ್ಲಿಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ದ್ವಾರದ ಬಳಿ ಇರುವ ಸಂಕರ್ಷಣ ಕಾಂಪ್ಲೆಕ್ಸ್‌ನಲ್ಲಿ ಎಸ್.ಎ ಮೆಡಿಕಲ್ಸ್ ಇದರ ಶುಭಾರಂಭವು ಆ.1 ರಂದು ಜರಗಿತು.
ತಾಲೂಕಿನಲ್ಲಿಯೇ ಅತೀ ಹೆಚ್ಚು ಅಭಿವೃದ್ಧಿ ಹೊಂದಿದ ಪೇಟೆ ಎಂದರೆ ಉಜಿರೆ. ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆ. ಇಂತಹ ಪ್ರದೇಶದಲ್ಲಿ ಗ್ರಾಹಕರ ಪ್ರೀತಿ ವಿಶ್ವಾಸದಿಂದ ಈ ಔಷಧಿ ಮಳಿಗೆಯು ಅಭಿವೃದ್ಧಿ ಕಾಣಲಿ ಎಂದು ಶಾಸಕ ಕೆ. ವಸಂತ ಬಂಗೇರರವರು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು. ವಿಜಯ ರಾಘವ ಪಡ್ವೆಟ್ನಾಯರವರು ಮಾತನಾಡಿ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು. ಉಜಿರೆ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ವಂ.ಫಾ| ಜೊಸೆಫ್ ಮಸ್ಕರೇನ್ಹಸ್ ಆಶೀವರ್ಚನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಶ್ರೀಧರ ಪೂಜಾರಿ, ಶರತ್‌ಕೃಷ್ಣ ಪಡ್ವೆಟ್ನಾಯ, ಉಜಿರೆ ಸಂತ ಅಂತೋನಿ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಪ್ಲೂರಿನ್ ವೇಗಸ್, ಗ್ರೇಸಿಯಾನ್ ವೇಗಸ್, ರೋಯಲ್ ಎಲೆಕ್ಟ್ರಾನಿಕ್ಸ್‌ನ ಮಾಲಕ ಹೆರಾಲ್ಡ್ ಡಿಸೋಜ, ಗುತ್ತಿಗೆದಾರ ಹೆರಾಲ್ಡ್ ಡಿಸೋಜ, ಮಾಲಕರ ಪೋಷಕರಾದ ಪ್ರಾನ್ಸಿಸ್ ಫೆರ್ನಾಂಡಿಸ್, ಗ್ರಾ.ಪಂ ಸದಸ್ಯೆ ಶ್ರೀಮತಿ ಎಮಿಲ್ಡಾ ಪೆರ್ನಾಂಡಿಸ್, ಗ್ರಾ.ಪಂ ಸದಸ್ಯರಾದ ರವಿ ಕುಮಾರ್ ಬರೆಮೇಲು, ಬಾಲಕೃಷ್ಣ ಗೌಡ, ಶ್ರೀಮತಿ ಪುಷ್ಪಾವತಿ, ವಾಳೆಯ ಗುರಿಕಾರ ಆಂಟನಿ ಫೆರ್ನಾಂಡಿಸ್, ಟಿ.ಜೆ ಮೋರಾಸ್ ಮೊದಲಾದವರು ಉಪಸ್ಥಿತರಿದ್ದರು. ನೆಲ್ಸನ್ ಮೋನಿಸ್ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು. ಮಾಲಕ ಪ್ರಕಾಶ್ ಫೆರ್ನಾಂಡಿಸ್, ಸಹೋದರರಾದ ಹಳ್ಳಿ ಮನೆ ರೆಸ್ಟೋರೆಂಟ್‌ನ ಮಾಲಕ ಪ್ರವೀಣ್ ಫೆರ್ನಾಂಡಿಸ್, ಸವಿತಾ ಫೆರ್ನಾಂ ಡಿಸ್, ಪ್ರಶಾಂತ್ ಫೆರ್ನಾಂಡಿಸ್ ಆಗಮಿಸಿದ ಅತಿಥಿಗಳನ್ನು ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.