HomePage_Banner_
HomePage_Banner_

ವೇಣೂರು: ಸೇವಾನಿವೃತ್ತಿ ಬೀಳ್ಕೊಡುಗೆ-ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಚಾಕಚಕ್ಯತೆಯ ದೈಹಿಕ ಶಿಕ್ಷಕರಿಂದ ಶಾಲೆಯಲ್ಲಿ ಶಿಸ್ತು: ಬಂಗೇರ

venur naveen bilkodugeವೇಣೂರು: ಗುಣಮಟ್ಟದ ಶಿಕ್ಷಣಕ್ಕೆ ವೇಣೂರು ಸರ್ಕಾರಿ ಪ್ರೌಢಶಾಲೆ ಸೇರಿದಂತೆ 2 ಶಾಲೆಗಳಿಗೆ ಡಾ| ಶಂಕರ ಅಡ್ಯಂತಾಯ ಸ್ಮಾರಕ ಉತ್ತಮ ಶಾಲಾ ಪ್ರಶಸ್ತಿ ಲಭಿಸಿದೆ. ಶಿಕ್ಷಕ ನವೀನ್‌ರವರ ಕ್ರೀಡಾಕ್ಷೇತ್ರದ ನಡವಳಿಕೆ ಎಲ್ಲರನ್ನು ಮೆಚ್ಚುವಂತೆ ಮಾಡಿದೆ. ಶಾಲೆಯಲ್ಲಿ ಚಾಕಚಕ್ಯತೆಯ ದೈಹಿಕ ಶಿಕ್ಷಣ ಶಿಕ್ಷಕರಿದ್ದಾಗ ಅಲ್ಲಿ ಶಿಸ್ತು ಮನೆ ಮಾಡುತ್ತದೆ, ಅಂತಹ ಶಿಕ್ಷಕ ನವೀನ್‌ರವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ರಾಜ್ಯ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜು. 31 ರಂದು ನವೀನ್ ಕುಮಾರ್ ಜೈನ್ ಅಭಿನಂದನ ಸಮಿತಿ ಹಾಗೂ ವೇಣೂರು ಸ.ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಜರಗಿದ ದೈಹಿಕ ಶಿಕ್ಷಣ ಶಿಕ್ಷಕ ನವೀನ್‌ರವರ ಸೇವಾ ನಿವೃತ್ತಿ ಬೀಳ್ಕೊಡುಗೆ ಹಾಗೂ ಡಾ| ಶಂಕರ ಅಡ್ಯಂತಾಯ ಸ್ಮಾರಕ ಉತ್ತಮ ಶಾಲಾ ಪ್ರಶಸ್ತಿ ನಗದು ಪುರಸ್ಕಾರದಿಂದ ನಿರ್ಮಿಸಲಾದ ವಿವಿಧ ಕಾಮಗಾರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಶಿಕ್ಷಕರ ಪ್ರಭಾವ ವಿದ್ಯಾರ್ಥಿಗಳಲ್ಲಿ ಶಾಶ್ವತ ವಾಗಿರುತ್ತದೆ.
ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡಿದರೂ ಶಿಸ್ತು ರೂಪಿಸುವವರು. ಸೇವಾನಿವೃತ್ತಿಯಲ್ಲಿ ನಿರಂತರ ಎಲ್ಲರ ಪ್ರೀತಿ ಗಳಿಸಿರುವ ನವೀನ್‌ರವರ ಕ್ಷಮತೆ ಮೆಚ್ಚುವಂಥದ್ದು ಎಂದರು.
ಶಿಕ್ಷಕರ ಪರವಾಗಿ ಹಿರಿಯ ಶಿಕ್ಷಕ ಸುಕೇಶ್ ಕೆ. ಯವರು ಮಾತನಾಡಿ, ನವೀನ್ ಅವರ ಕ್ರೀಡಾಸಾಧನೆಗೆ ಶಾಲೆಯಲ್ಲಿರುವ ಪ್ರಶಸ್ತಿಗಳೇ ಸಾಕ್ಷಿಯಾಗಿದೆ ಎಂದರು.
ಶಾಲಾ ವತಿಯಿಂದ, ಸಹೋದ್ಯೋಗಿಗಳಿಂದ ಹಾಗೂ ಅಭಿಮಾನಿಗಳಿಂದ ಶಿಕ್ಷಕ ನವೀನ್ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಸಹೋದ್ಯೋಗಿಳ, ಊರಿನ ಗಣ್ಯರ, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಕ್ರೀಡಾಕ್ಷೇತ್ರದಲ್ಲಿ ಶಾಲೆಗೆ ಹೆಸರು ತರಲು ಸಾಧ್ಯವಾಗಿದೆ. ಇದಕ್ಕೆಲ್ಲ ಪತ್ನಿ ಮಕ್ಕಳು ಬೆನ್ನೆಲುಬು ಆಗಿ ನಿಂತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಕ ನವೀನ್ ಅವರು ಶಾಲೆಗೆ ದತ್ತುನಿಧಿಯಾಗಿ ರೂ. 10 ಸಾವಿರ ಮೊತ್ತದ ಚೆಕ್ಕನ್ನು ಶಾಲಾ ಉಪಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಪತ್ರಕರ್ತ ಲ| ದೇವಿಪ್ರಸಾದ್ ಅವರು ಅಭಿನಂದನ ಭಾಷಣಗೈದರು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರುಗಳಾದ ನೇಮಯ್ಯ ಕುಲಾಲ್, ಶಹನಾಜ್, ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ. ವಿಜಯರಾಜ ಅಧಿಕಾರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಶಿವಶಂಕರ ಭಟ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ, ತಾ| ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ನಾರಾವಿ, ಕಾರ್ಯದರ್ಶಿ ರಿಯಾಜ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಭಿನಂದನ ಸಮಿತಿ ಅಧ್ಯಕ್ಷ ಜಿನರಾಜ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಉಪಪ್ರಾಂಶುಪಾಲ ವೆಂಕಟೇಶ್ ಎಸ್. ತುಳಪುಳೆ ಸ್ವಾಗತಿಸಿ ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕರಾದ ಗಣೇಶ್ ಮೊಗವೀರ ಹಾಗೂ ಜ್ಯೋತಿ ಜೂಲಿಯೆಟ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.