HomePage_Banner_
HomePage_Banner_

ಎಚ್1ಎನ್1ಗೆ ವೇಣೂರು ಗ್ರಾ.ಪಂ. ಸಿಬ್ಬಂದಿ ಪುಷ್ಪಾವತಿ ಬಲಿ

PUSHPAVATHIವೇಣೂರು:  ಎಚ್1ಎನ್1 ಜ್ವರದಿಂದ ಬಳಲುತ್ತಿದ್ದ ಮಹಿಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜು. 30ರಂದು ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾ.ಪಂ.ನಲ್ಲಿ ಡಾಟ ಎಂಟ್ರಿ ಆಪರೇಟರ್ ಆಗಿದ್ದ ಪಡಂಗಡಿ ನಿವಾಸಿ ಪಿ. ಪುಷ್ಪಾವತಿ ಮೃತಪಟ್ಟ ದುರ್ದೈವಿ.
8 ತಿಂಗಳ ತುಂಬು ಗರ್ಭಿಣಿಯಾಗಿದ್ದ ಇವರಿಗೆ ಜ್ವರ ಕಾಣಿಸಿಕೊಂಡಿದ್ದು, ಬದ್ಯಾರು ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್1ಎನ್1 ಜ್ವರ ಇರುವುದು ಪತ್ತೆಯಾಗಿದೆ. ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 21ರಂದು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಗುವನ್ನು ಹೊರತೆಗೆಯಲಾಗಿತ್ತು. ಮಗು ಆರೋಗ್ಯವಾಗಿದ್ದು, ಆದರೆ ಪುಷ್ಪಾವತಿಯವರು ಸಾವು ಬದುಕಿನ ಮಧ್ಯೆ ಹೋರಾಡಿ ಸುಮಾರು 12 ದಿನಗಳ ಬಳಿಕ ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಇವರನ್ನು ಗಂಜಿಮಠಕ್ಕೆ ಮದುವೆ ಮಾಡಿಕೊಡಲಾಗಿತ್ತು. ಮೃತರು ತಾಯಿ, ಪತಿ, ಸಹೋದರ ಹಾಗೂ 5 ಮಂದಿ ಸಹೋದರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.