ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ: ವ್ಯವಸ್ಥಾಪನ ಸಮಿತಿ ರಚನೆ

suddi COLORpdf BLDY.p65ತೋಟತ್ತಾಡಿ: ಇತಿಹಾಸ ಪ್ರಸಿದ್ಧ ತೋಟತ್ತಾಡಿ ಗ್ರಾಮದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ದ.ಕ. ಮಂಗಳೂರು ಇದರ ಆದೇಶದಂತೆ ರಚನೆಗೊಂಡಿರುತ್ತದೆ.
ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಚನನ ಗೌಡ ಪಿತ್ತಿಲು ಇವರು ಸರ್ವಾನು ಮತದಿಂದ ಆಯ್ಕೆಯಾಗಿರುತ್ತಾರೆ. ಸಮಿತಿಯ ಸದಸ್ಯರುಗಳಾಗಿ ಲಕ್ಷ್ಮಣ ಗೌಡ ಕಲ್ಲರಿಗೆ, ಸನತ್ ಕುಮಾರ್ ಮೂರ್ಜೆ, ದಿನೇಶ ಕೆ. ಕೋಟೆ, ಕೃಷ್ಣಪ್ಪ ಗೌಡ ಅಗರಿ, ಶೇಖರ ಪೂಜಾರಿ ಕಳೆಂಜೊಟ್ಟು, ಶ್ರೀಮತಿ ದಮಯಂತಿ ಕಜೆ, ಶ್ರೀಮತಿ ಪ್ರೇಮ ಮುಂಡೈಲು ಇವರು ಆಯ್ಕೆಯಾಗಿರುತ್ತಾರೆ. ಅರ್ಚಕರಾಗಿ ದಿವಾಕರ ಭಟ್ ಆಯ್ಕೆಯಾಗಿರುತ್ತಾರೆ ಎಂದು ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಮುಕುಂದ ಸುವರ್ಣರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.