HomePage_Banner_
HomePage_Banner_

ಬಿಜೆಪಿ ಮಂಡಲದ 7 ಶಕ್ತಿ ಕೇಂದ್ರ ಮತ್ತು ನಗರ ಪಂಚಾಯತ್ ಶಕ್ತಿ ಕೇಂದ್ರಕ್ಕೆ ನೂತನ ಅಧ್ಯಕ್ಷ- ಕಾರ್ಯದರ್ಶಿಗಳ ನೇಮಕ

suddi COLORpdf BLDY.p65ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ೭ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಪಕ್ಷದ ಶಕ್ತಿ ಕೇಂದ್ರಗಳಿಗೆ ಮತ್ತು ಬೆಳ್ತಂಗಡಿ ನಗರ ಶಕ್ತಿ ಕೇಂದ್ರಕ್ಕೆ ನೂತನ ಅಧ್ಯಕ್ಷ ಕಾರ್ಯದರ್ಶಿಗಳನ್ನು ನೇಮಕಗೊಳಿಸಿ ಮಂಡಲದ ಅಧ್ಯಕ್ಷ ರಂಜನ್ ಜಿ. ಗೌಡ ಆದೇಶ ನೀಡಿದ್ದಾರೆ.
ನಾರಾವಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಉದಯ ಹೆಗ್ಡೆ ನಾರಾವಿ, ಕಾರ್ಯದರ್ಶಿಯಾಗಿ ವಿಠಲ ಸಿ. ಪೂಜಾರಿ, ಅಳದಂಗಡಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಭಾಸ್ಕರ ಸಾಲಿಯಾನ್ ಶಿರ್ಲಾಲು, ಕಾರ್ಯದರ್ಶಿಯಾಗಿ ಸುದೀರ್ ಆರ್. ಸುವರ್ಣ, ಕುವೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಅರ್ಕಜೆ, ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ ಮಡಂತ್ಯಾರು, ಲಾಯಿಲ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಭರತ್ ಕುಮಾರ್ ಇಂದಬೆಟ್ಟು, ಕಾರ್ಯದರ್ಶಿಯಾಗಿ ಸುಧಾಕರ ಬಿ.ಎಲ್, ಉಜಿರೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಾಬು ಗೌಡ ನೆರಿಯ, ಕಾರ್ಯದರ್ಶಿ ಯಾಗಿ ರಾಧಾಕೃಷ್ಣ ಓಡಲ ಉಜಿರೆ, ಧರ್ಮಸ್ಥಳ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕೊಕ್ಕಡ, ಕಾರ್ಯದರ್ಶಿಯಾಗಿ ರಮೇಶ್ ಗೌಡ ಶಿಬಾಜೆ, ಕಣಿಯೂರು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಪಿ. ಪುತ್ತಿಲ, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಲ್ಲಳಿಕೆ ಇವರನ್ನು ನೇಮಕಗೊಳಿಸಲಾಗಿದೆ. ಬೆಳ್ತಂಗಡಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಶಂಕರ ಹೆಗ್ಡೆ ಮತ್ತು ಕಾರ್ಯದರ್ಶಿಯಾಗಿ ರಾಜೇಶ್ ಪೂಜಾರಿ ಹುಣ್ಸೆಕಟ್ಟೆ ಇವರನ್ನು ನೇಮಕಗೊಳಿಸಲಾಗಿದೆ.
ಪಕ್ಷದ ನಾಯಕರ ಮಾರ್ಗದರ್ಶನದಂತೆ ಸಾಂಘಿಕ ನೆಲೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.