ಬಂಟ್ವಾಳ ಪ್ರಕರಣ: ಹರೀಶ್ ಪೂಂಜ ಜಾಮೀನು

harish poonja new 1ಬೆಳ್ತಂಗಡಿ: ಬಿ.ಸಿ.ರೋಡಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಹಾಗೂ ಶರತ್ ಮಡಿವಾಳ ಅವರ ಶವಯಾತ್ರೆ ವೇಳೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ, ಕೊಲೆಯತ್ನ ಪ್ರಕರಣ ದಾಖಲಾಗಿದ್ದ ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಸೇರಿದಂತೆ ಹಿಂದೂ ಸಂಘಟನೆಯ ಐದು
ಜಾಮೀನು ನೀಡಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆಯ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಹಿಂದೂ ಸಂಘಟನೆಯವರು ನಡೆಸಿದ ಪ್ರತಿಭಟನೆ ಹಾಗೂ ನಂತರ ದುಷ್ಕರ್ಮಿಗಳಿಂದ ಹತ್ಯೆಯಾದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಸೇರಿದಂತೆ ಹಿಂದೂ ಸಂಘಟನೆಯ ಐವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿತ್ತು. ಪೊಲೀಸರು ಈ ಐದು ಮಂದಿಯ ಬಂಧನಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿದ್ದರೂ ಅದು ಯಶಸ್ವಿಯಾಗಿರಲಿಲ್ಲ. ಈ ಮಧ್ಯೆ ಹರೀಶ್ ಪೂಂಜಾ ಅವರ ಮೇಲೆ ಹಾಕಿದ ಸುಳ್ಳು ಕೇಸನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಹಲವಾರು ಸಂಘಟನೆಗಳು, ಸಂಸ್ಥೆಯವರು ತಾಲೂಕು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಇದೀಗ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಐದು ಮಂದಿ ನಾಯಕರಿಗೂ ಜಾಮೀನು ನೀಡಿದ ಆದೇಶಿಸಿದೆ. ಇವರ ಪರವಾಗಿ ನ್ಯಾಯವಾದಿಗಳಾದ ಶಂಭು ಶರ್ಮ ಮತ್ತು ಅಜೇಯ ಸುವರ್ಣ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.