ಮಕ್ಕಳ ಸಾಹಿತ್ಯಕ್ಕೆ ಒತ್ತು ನೀಡಿದ್ದು ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸಿದೆ: ಡಾ| ಹೆಗ್ಗಡೆ

Sahithya sowrabha pusthaka bidugadeಧರ್ಮಸ್ಥಳ : 18 ವರ್ಷಗಳ ನಂತರ ಉಜಿರೆಯಲ್ಲಿ ನಡೆದ 21 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಈ ಬಾರಿ ಮಕ್ಕಳ ಸಾಹಿತ್ಯ ಚಟುವಟಿಕೆಗೆ ಅವಕಾಶ ನೀಡಿದ್ದು, ಮತ್ತು ಸ್ಮರಣ ಸಂಚಿಕೆಯಲ್ಲೂ ಕೂಡ ಮಕ್ಕಳ ಆಯ್ದ ಬರಹಗಳನ್ನು ಪ್ರಕಟಿಸಿದ್ದು ಇಡೀ ಸಮ್ಮೇಳನವನ್ನು ಅವಿಸ್ಮರಣೀಯಗೊಳಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಉಜಿರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಾಹಿತ್ಯ ಸೌರಭ ಪುಸ್ತಕವನ್ನು ಜು. 26 ರಂದು ಧರ್ಮಸ್ಥಳದ ಬೀಡಿನಲ್ಲಿ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
20 ಸಮ್ಮೇಳನಗಳ ಸಂಚಿಕೆಗಿಂತ ಗಾತ್ರದಲ್ಲಿ, ಸೌಂದರ್ಯದಲ್ಲಿ ಮತ್ತು ಮೌಲ್ಯದಲ್ಲಿ ಈ ಸಂಚಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ| ಬಿ. ಯಶೋವರ್ಮ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್, ಮಕ್ಕಳ ಸಮ್ಮೇಳನದ ಸಂಯೋಜಕ ಬಿ. ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಂಚಿಕೆಯ ಪ್ರಧಾನ ಸಂಪಾಕರಾಗಿದ್ದ ಯದುಪತಿ ಗೌಡ ಪುಸ್ತಕದ ಬಗ್ಗೆ ಡಾ| ಹೆಗ್ಗಡೆಯವರಿಗೆ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.