ಮುಂಡೂರು ಶಾರದಾಂಬ ಯುವಕ ಮಂಡಲ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

1

ಮುಂಡೂರು : ಶ್ರೀ ಶಾರದಾಂಬ ಯುವಕ ಮಂಡಲ ಮುಂಡೂರು ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಮೇಲಂತಬೆಟ್ಟು ಹಾಗೂ ಬಳೆಂಜ ಗ್ರಾಮ ಪಂಚಾಯತ್ ಇವುಗಳ ಸಹಕಾರದೊಂದಿಗೆ, ಮುಂಡೂರು ಗ್ರಾಮದ ಸರ್ವ ಸಂಘಟನೆಗಳ ಹಾಗೂ ಜನರ ಸಹಭಾಗಿತ್ವದೊಂದಿಗೆ ಶ್ರಮದಾನವು ಜು.೧೬ ರಂದು ನಡೆಯಿತು.
ಶ್ರಮದಾನದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ನೀತಾ ಮಹೇಶ್ ಕುಮಾರ್ ನಡಕ್ಕರ ಮತ್ತು ಸವಿತಾ ವಿಶ್ವನಾಥ ಪನೆತ್ತಗುರಿ ಇವರು ನಡೆಸಿಕೊಟ್ಟರು. ಬದ್ಯಾರಿನಿಂದ ಮುಂಡೂರಿನ ನಾನಿಂತ್ಯಾರುವರೆಗಿನ ರಸ್ತೆ, ಚರಂಡಿ, ರಸ್ತೆಯಲ್ಲಿಯ ಗುಂಡಿಗಳನ್ನು ದುರಸ್ಥಿಗೊಳಿಸುವ ಕೆಲಸವನ್ನು ಶ್ರಮದಾನದ ಮುಖಾಂತರ ನಿರ್ವಹಿಸಲಾಯಿತು.
ಈ ಸಂದರ್ಭ ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲಿಯಾನ್, ಕಾರ್ಯದರ್ಶಿ ಪ್ರಶಾಂತ ಆಚಾರ್ಯ, ಉಪಾಧ್ಯಕ್ಷ ಇಸುಬು ಬಡೆಕ್ಕಿಲ, ಕೋಶಾಧಿಕಾರಿ ರಾಜೀವ ಸಾಲಿಯಾನ್, ಗುರುವಪ್ಪ ಸಾಲಿಯಾನ್ ಕೇರ‍್ಯಾರ್, ಗೌರವ ಸಲಹೆಗಾರರಾದ ಚೆನ್ನಪ್ಪ ಬಂಗೇರ ಪರನೀರು, ಹರಿಶ್ಚಂದ್ರ ಹೆಗ್ಡೆ, ವಸಂತ ಪೂಜಾರಿ ನಾನಿಂತ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕ್ರೀಢಾ ಕಾರ್ಯದರ್ಶಿ ಬಾಬು ಎ, ಲೆಕ್ಕ ಪರಿಶೋಧಕ ಹರೀಶ್ ಕುದ್ಕೋಳಿ, ಉಮೇಶ್ ಆಚಾರ್ಯ, ಬೋಜ ಪೂಜಾರಿ, ಅಶೋಕ್ ಕುಮಾರ್ ಜೈನ್, ರಮೇಶ್ ದೇವಾಡಿಗ, ಅಶೋಕ ಕೊಡಕ್ಕಾಲು, ಜಯಾನಂದ ಪರನೀರು, ಅಲೆಕ್ಸ್ ವೇಗಸ್ ಉಪಸ್ಥಿತರಿದ್ದರು. ಸುಮಾರು ೫೫ ಜನ ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸಿದರು. ತಾಲೂಕು ಪಂಚಾಯತ್ ಸದಸ್ಯ ಜಯಶೀಲ ಕುಶಾಲಪ್ಪ ಗೌಡ ಸಹಕರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಕೋಶಾಧಿಕಾರಿ ರಾಜೀವ ಸಾಲಿಯಾನ್ ಪ್ರಸ್ತಾವನೆಗೈದರು. ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು ಸ್ವಾಗತಿಸಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.