ಮಂಗಳೂರು ಧರ್ಮಪ್ರಾಂತ್ಯದಿಂದ ವೇಣೂರು ಐಸಿವೈಎಂಗೆ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

3

ವೇಣೂರು: ಭಾರತೀಯ ಕಥೊಲಿಕ್ ಯುವ ಸಂಚಲನ (ಐಸಿವೈಎಂ), ಕ್ರಿಸ್ತರಾಜ ದೇವಾಲಯ ವೇಣೂರು ಘಟಕಕ್ಕೆ ಮಂಗಳೂರು ಧರ್ಮಪ್ರಾಂತ್ಯದಿಂದ ೨೦೧೬-೧೭ನೇ ಸಾಲಿನ ಅತ್ಯುತ್ತಮ ಕಾರ್ಯಕ್ರಮ ಘಟಕ ಪ್ರಶಸ್ತಿ ಲಭಿಸಿದೆ.
ಆಲಂಗಾರು ಚರ್ಚ್ ವಠಾರದಲ್ಲಿ ವೇಣೂರು ಐಸಿವೈಎಂನಿಂದ ನಡೆದ ವಾಸ್ತವ್ಯ ಶಿಬಿರದ ಯಶಸ್ವಿ ಆಯೋಜನೆಗಾಗಿ ಈ ಪ್ರಶಸ್ತಿ ಲಭಿಸಿದೆ.
ಮಂಗಳೂರು ರೊಸಾರಿಯೋ ಚರ್ಚ್ ಧರ್ಮಗುರು ಫಾ| ಜೆ.ಪಿ. ಕ್ರಾಸ್ತಾ ಅವರು ಮಂಗಳೂರಿನ ರೊಸಾರಿಯಾ ಚರ್ಚ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ವೇಣೂರು ಐಸಿವೈಎಂನ ನಿರ್ದೇಶಕ ಧರ್ಮಗುರು ಫಾ| ಆಂಟನಿ ಲೂವಿಸ್, ಅಧ್ಯಕ್ಷ ವಿಶಾಲ್ ಮಿನೇಜಸ್, ಕಾರ್ಯದರ್ಶಿ ಲೀಸಾ ಡಿಯಾಸ್, ಪ್ರದೀಪ್ ಡಿಸೋಜ, ಸಹ ಸಚೇತಕ ಅರುಣ್ ಡಿಸೋಜ ಹಾಗೂ ಐಸಿವೈಎಂ ಸದಸ್ಯರು ಉಪಸ್ಥಿತರಿದ್ದರು. ಈ ಹಿಂದೆ ಐಸಿವೈಎಂ ವೇಣೂರು ಘಟಕಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ೨೦೧೬-೧೭ನೇ ಸಾಲಿನ ‘ಅತ್ಯುತ್ತಮ ಕಾರ್ಯಕ್ರಮ ಘಟಕ ಪ್ರಶಸ್ತಿ ಲಭಿಸಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.