ಪದವಿ ಕಾಲೇಜುಗಳ ಪ್ರಾರಂಭಿಕ ಸಮಯ 8 ಗಂಟೆಗಿಳಿಸಿ ಹೊಸ ಆದೇಶ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

prathibhataneಬೆಳ್ತಂಗಡಿ: ಪದವಿ ಕಾಲೇಜುಗಳ ತರಗತಿ ಅವಧಿ ಬದಲಾವಣೆಗೊಳಿಸಿ 10 ಗಂಟೆಗೆ ಇದ್ದುದನ್ನು 8 ಗಂಟೆಗೆ ಇಳಿಸಿದ ಕ್ರಮವನ್ನು ವಿರೋಧಿಸಿದ ಬೆಳ್ತಂಗಡಿ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜು. 17 ರಂದು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಈ ಹೊಸ ಸುತ್ತೋಲೆಯಿಂದ ಗ್ರಾಮಾಂತರ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ನಗರ ಪ್ರದೇಶದ ಕಾಲೇಜುಗಳಿಗೆ ಅನುಕೂಲವಾಗಬಹುದು. ಆದರೆ ಕೊಕ್ಕಡ, ಪಟ್ರಮೆ, ಮಲವಂತಿಗೆ, ದಿಡುಪೆ, ಪುದುವೆಟ್ಟು, ಚಾರ್ಮಾಡಿ, ನೆರಿಯ, ಶಿಶಿಲ, ಶಿಬಾಜೆ, ಅರಸಿನಮಕ್ಕಿ ಇತ್ಯಾಧಿ ದೂರದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಹಾಜರಾತಿ ಕೊರತೆಯಿಂದ ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ಅನಾನುಕೂಲವಾಗಿ ಭವಿಷ್ಯಕ್ಕೇಮಾರಕವಾಗುವ ಸಂಭವವಿದೆ. ಈಗಾಗಲೇ ದೂರದ ಮಕ್ಕಳು 10 ಗಂಟೆಗೆ ಕಾಲೇಜು ತಲುಪಬೇಕಾದರೂ ಬೆಳಿಗ್ಗೆ 6.45 – 7.00ಕ್ಕೇ ಮನೆಯಿಂದ ಹೊರಡುವ ಪರಿಸ್ಥಿತಿ ಇದ್ದು, ಮುಂದೇನಾದರೂ 8 ಗಂಟೆಗೆ ಕಾಲೇಜು ಪ್ರಾರಂಭವಾಗಬೇಕೆಂದಾದರೆ ಬೆಳಿಗ್ಗೆ 5 ಗಂಟೆಗೇ ಹೊರಡಬೇಕಾದಿತು. ಇದರಿಂದ ಈಗಾಗಲೇ ಬೆಳಗ್ಗಿನ ವೇಳೆ ಸರಕಾರಿ ಬಸ್ಸು ಸೌಲಭ್ಯ, ಖಾಸಗಿ ವಾಹನ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆಯಾಗುವ ಸಂಭವವಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪವೆತ್ತಿದ್ದಾರೆ.
ಆದುದರಿಂದ ಸರಕಾರ ಈ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ ಮನವಿಯನ್ನು ಕಾಲೇಜು ಪ್ರಾಂಶುಪಾಲರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಪ್ರಾಚಾರ್ಯ ರಾಜಪ್ಪ ಅವರು ಮನವಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.